ಬಿಗ್ ಬ್ರೇಕಿಂಗ್: ಸಿಎಂ ಕುಮಾರಸ್ವಾಮಿ ವಿರುದ್ಧ ದೂರು ದಾಖಲು..!!

27 Dec 2018 12:25 PM | Politics
5649 Report

ಕೆಲ ದಿನಗಳ ಹಿಂದಷ್ಟೆ ಜೆಡಿಎಸ್ ಮುಖಂಡನ ಹತ್ಯೆ ಮಾಡಿದವರನ್ನು ಶೂಟೌಟ್ ಮಾಡಿ ಎಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಹೇಳಿರುವುದಕ್ಕೆ ಇದೀಗ ಅವರ ವಿರುದ್ಧ ದೂರು ದಾಖಲಾಗಿದೆ ಎನ್ನಲಾಗಿದೆ.

ಕಳೆದ ಡಿ.24 ರಂದು ಮಂಡ್ಯ ದ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್​ ಅವರನ್ನು ದುಷ್ಕರ್ಮಿಗಳು ಕಾರಿನಲ್ಲಿಯೇ ಕತ್ತು ಕೊಯ್ದು ಹತ್ಯೆ ಮಾಡಿದ್ದರು, ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಹಂತಕರನ್ನು ಶೂಟೌಟ್​ ಮಾಡಿ ಎಂದು ಪೊಲೀಸ್​ ಅಧಿಕಾರಿಗಳಿಗೆ ಆದೇಶವನ್ನು ನೀಡಿದ್ದರು… ಸಿಎಂ ಈ ಹೇಳಿಕೆಗೆ ಬಾರೀ ವಿರೋಧವು ವ್ಯಕ್ತವಾಗಿದ್ದು ಆರ್​ಟಿಐ ಕಾರ್ಯಕರ್ತರಾದ ನರಸಿಂಹಮೂರ್ತಿ ಎಂಬುವವರು ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಮುಖ್ಯಮಂತ್ರಿ ಅವರ ವಿರುದ್ಧ ದೂರನ್ನು ದಾಖಲಿಸಿದ್ದಾರೆ.

Edited By

Manjula M

Reported By

Manjula M

Comments