ದೇವೇಗೌಡರು ಹಾಗೂ ಎಚ್‌ಡಿಕೆಗೆ ಬಳಿ ಕ್ಷಮೆ ಕೇಳಲೆ ಬೇಕು ಎಂದು ಪಟ್ಟು..? ಅಷ್ಟಕ್ಕೂ ಯಾರು, ಯಾವ ವಿಚಾರಕ್ಕಾಗಿ..!?

25 Dec 2018 2:26 PM | Politics
408 Report

ವೈಕುಂಠ ಏಕಾದಶಿ ಅಂಗವಾಗಿ ಆ ದಿನದಂದು ತಿಮ್ಮಪ್ಪನ ದರ್ಶನ ಪಡೆಯಲು ತಿರುಮಲಕ್ಕೆ ಭೇಟಿ ನೀಡಿದ್ದಂತಹ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ  ಮತ್ತು ಕರ್ನಾಟಕದ  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಶಿಷ್ಟಾಚಾರದ ಪ್ರಕಾರ ಯಾವುದೇ ಗೌರವ ನೀಡದೇ ಅವಮಾನ ಮಾಡಲಾಗಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ. ಈ ವಿಚಾರ ಸ್ಥಳೀಯವಾಗಿ ಜಟಾಪಟಿಗೂ ಕಾರಣವಾಗಿದೆ.

ತಿರುಮಲಕ್ಕೆ ಬಂದಿದ್ದಾಗ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಸೂಕ್ತ ಭದ್ರತೆ ಒದಗಿಸದೇ ಅಗೌರವ ತೋರಲಾಗಿದೆ ಎಂದು ತಿರುಮಲ- ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಮಾಜಿ ಸದಸ್ಯ ಒ.ವಿ. ರಮಣ ಆರೋಪಿಸಿದ್ದಾರೆ. ಅವರ ಈ ಟೀಕೆಗೆ ಶ್ರೀನಿವಾಸ ರಾಜು, ಕಾನೂನು ನೋಟಿಸ್‌ ಮೂಲಕ ಪ್ರತಿಕ್ರಿಯೆ ನೀಡಿದ್ದು, ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. ಇದಕ್ಕೆ ಮರು ಪ್ರತಿಕ್ರಿಯೆ ನೀಡಿರುವ ರಮಣ, ನನ್ನ ಆರೋಪದ ಕುರಿತು ಕ್ಷಮೆ ಯಾಚನೆಗೆ ನಾನು ಸಿದ್ಧ. ಆದರೆ ದೇವೇಗೌಡ ಮತ್ತು ಎಚ್‌ಡಿಕೆಗೆ ಆಗಿರುವ ಅವಮಾನಕ್ಕೆ ಕ್ಷಮೆ ಕೇಳಲು ನೀವು ಸಿದ್ಧವೇ ಎಂದು ತಿರುಗೇಟು ನೀಡಿದ್ದಾರೆ.

Edited By

Manjula M

Reported By

Manjula M

Comments