ಖಡಕ್ ವಾರ್ನಿಂಗ್ ಕೊಟ್ಟ ದಿನೇಶ್ ಗುಂಡೂರಾವ್..! ಯಾರಿಗೆ ಗೊತ್ತಾ..?

24 Dec 2018 5:39 PM | Politics
166 Report

ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾದ  ನಂತರ  ಕಾಂಗ್ರೆಸ್’ನ  ಹಿರಿಯ ಶಾಸಕರು ಸಚಿವರಾಗದೇ ಇರುವುದಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ನಾಲ್ಕು ದಿನ ಕಾದು ನೋಡಿ ಅಂತ ಕೂಡ ಪರೋಕ್ಷವಾಗಿ ಕಾಂಗ್ರೆಸ್ ಗೆ ಗುಡ್ ಬೈ ಹೇಳುವ ಮುನ್ಸೂಚನೆಯನ್ನು ರಮೇಶ್ ಜಾರಕಿಹೋಳಿಯನ್ನು ನೀಡಿದ್ದರು . ಇದೆಲ್ಲದರ ನಡುವೆ ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ದಿನೇಶ್ ಗುಂಡೂರಾವ್ ಅವರು ಪಕ್ಷದ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿರುವ ಶಾಸಕರುಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ..

ಇದೇ ಸಮಯದಲ್ಲಿ ಮಾತನಾಡಿ ರಾಮಲಿಂಗಾರೆಡ್ಡಿ ನಮ್ಮ ಹಿರಿಯ ನಾಯಕರು ಪಕ್ಷಕ್ಕೆ ಅವರದ್ದೇ ಆದ ದೊಡ್ಡ ಕೊಡುಗೆಯಿದೆ ಅವರ ಜೊತೆ ನಾನು ಮುಕ್ತವಾಗಿ ಚರ್ಚಿಸುತ್ತೇನೆ ಅಂತ ಹೇಳಿದರು. ರಮೇಶ್ ಜಾರಕಿಹೊಳಿ ಕೂಡ ಪಕ್ಷದ ಬಗ್ಗೆ ಮಾತನಾಡಿಲ್ಲ ಅವರ ವೈಯುಕ್ತಿಕ ಕಾರಣದಿಂದ ಈ ಪರಿಸ್ಥಿತಿ ಬಂದಿದೆ ಸಚಿವರಾಗಿ ಅವರು ಕೆಲಸ ಮಾಡೋಕೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.

 

Edited By

Manjula M

Reported By

Manjula M

Comments