ಇಂದು ಸಂಜೆ 5:20ಕ್ಕೆ ನೂತನ ಸಚಿವರಿಂದ ಪ್ರಮಾಣ: ಯಾರಿಗೆ ಯಾವ ಸ್ಥಾನ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!!

22 Dec 2018 10:26 AM | Politics
3680 Report

ಕರ್ನಾಟಕ ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗಧಿಯಾಗಿದ್ದು, ಶನಿವಾರ ಸಂಜೆ 5:20ಕ್ಕೆ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರುಗಳ ಪ್ರಮಾಣ ವಚನ ನೆರವೇರಲಿದೆ.ಈಗಾಗಲೇ ಇರುವ ಇಬ್ಬರು ಸಚಿವರುಗಳನ್ನು ಸಚಿವ ಸಂಪುಟದಿಂದ ಕೈ ಬಿಡಲಾಗಿದ್ದು, 8 ಮಂದಿ ನೂತನ ಸಚಿವರುಗಳು ಸಚಿವ ಸಂಪುಟದಲ್ಲಿ ಅವಕಾಶ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಸಚಿವ ರಮೇಶ್ ಜಾರಕಿಹೊಳಿ ಮತ್ತು ಅರಣ್ಯ ಸಚಿವರಾದ ಆರ್.ಶಂಕರ್ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ . ಶಾಸಕರಾದ ಸಿ.ಎಸ್ ಶಿವಳ್ಳಿ, ಎಂಟಿಬಿ ನಾಗರಾಜ್, ಪಿ.ಟಿ.ಪರಮೇಶ್ವರ್ ನಾಯ್ಕ್, ರಹೀಂ ಖಾನ್ , ಇ. ತುಕಾರಾಂ , ಸತೀಶ್ ಜಾರಕಿಹೊಳಿ , ಎಂ.ಬಿ. ಪಾಟೀಲ್ ಮತ್ತು ವಿಧಾನಪರಿಷತ್ ಸದಸ್ಯ ಆರ್ .ಬಿ. ತಿಮ್ಮಾಪುರ್ ಸಚಿವ ಸಂಪುಟದಲ್ಲಿ ಅವಕಾಶ ಪಡೆದಿದ್ದಾರೆ ಎಂಬುದು ಮಾಹಿತಿಗಳ ಪ್ರಕಾರ ತಿಳಿದುಬಂದಿದೆ

Edited By

Manjula M

Reported By

Manjula M

Comments