ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾರು ಅಪಘಾತ..!!

20 Dec 2018 6:04 PM | Politics
359 Report

ಬಿಜೆಪಿಯ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ  ಜಗದೀಶ್‌ ಶೆಟ್ಟರ್‌ ಅವರ ಕಾರು ಗುರುವಾರ ಅಪಘಾತಕ್ಕೆ ಒಳಗಾಗಿದೆ. ಆದರೆ ಜಗದೀಶ್ ಶೆಟ್ಟರ್‌ ಅವರಿಗೆ ಯಾವುದೇ ಅಪಾಯ ಉಂಟಾಗದೇ  ಪಾರಾಗಿದ್ದಾರೆ.

ಗುರುವಾರ ಅಂದರೆ ಇಂದು ಮಧ್ಯಾಹ್ನ ಹೊಟೇಲ್‌ನಿಂದ ಸುವರ್ಣ ಸೌಧಕ್ಕೆ ತೆರಳುತ್ತಿದ್ದ ಸಮಯದಲ್ಲಿ ನಗರದ ಧರ್ಮನಾಥ ವೃತ್ತದ ಬಳಿ ಜಗದೀಶ್‌ ಶೆಟ್ಟರ್‌ ಅವರ ಕಾರಿಗೆ ಹಿಂಬದಿಯಿಂದ ಬಂದ ಇನ್ನೊವಾ ಕಾರೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ  ಇನ್ನೋವಾ ಕಾರಿನ ಬಂಪರ್ ಹಾಗೂ ಬಾನೆಟ್ ಜಖಂ ಆಗಿವೆ. ಶೆಟ್ಟರ್​ ಅವರ ಕಾರಿಗೆ ಯಾವುದೇ ಹಾನಿಯಾಗಿಲ್ಲ ಹಾಗೂ ಅವರಿಗೂ ಕೂಡ ಯಾವುದೆ ರೀತಿಯ ಪ್ರಾಣಾಪಾಯವಾಗಿಲ್ಲ..

Edited By

Manjula M

Reported By

Manjula M

Comments