ದೋಸ್ತಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಡೇಟ್ ಫಿಕ್ಸ್..! ಯಾರಿಗೆ ಯಾವ ಸ್ಥಾನ..? ಇಲ್ಲಿದೆ ನೋಡಿ

19 Dec 2018 10:08 AM | Politics
5166 Report

ದೋಸ್ತಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಡಿ. 22ಕ್ಕೆ ಆಗುವುದು ಬಹುತೇಕ ಫಿಕ್ಸ್ ಆಗಿದೆ. ಅದರ ಜೊತೆಯಲ್ಲೆ ಸಣ್ಣ ಪ್ರಮಾಣದಲ್ಲಿ ಸಂಪುಟ ಪುನಾರಚನೆ ಆಗಲಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೋಮವಾರ ತಿಳಿಸಿದ್ದರು.

ಸಚಿವ ಸಂಪುಟದಿಂದ ಇಬ್ಬರಿಗೆ ಕೊಕ್ ನೀಡುವ ಸಾಧ್ಯತೆ ಇದೆ. ಆರ್. ಶಂಕರ್ ಮತ್ತು ಜಯಮಾಲಾ ರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ. ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಎಂ.ಬಿ. ಪಾಟೀಲ್, ಎಸ್ . ಅರ್. ಪಾಟೀಲ್, ಬಿ.ಸಿ. ಪಾಟೀಲ್, ಬಿ. ಕೆ. ಸಂಗಮೇಶ್, ಎಂ. ಟಿ. ಬಿ. ನಾಗರಾಜ್, ಸಿ. ಎಸ್. ಶಿವಳ್ಳಿ, ರಾಮಲಿಂಗಾ ರೆಡ್ಡಿ, ಎಚ್. ಕೆ. ಪಾಟೀಲ್, ಇ. ತುಕಾರಾಂ, ಬಿ. ನಾಗೇಂದ್ರ, ಆನಂದ ಸಿಂಗ್, ರೂಪಾ, ಲಕ್ಷ್ಮೀ ಹೆಬ್ಬಾರ್ ಹೆಸರುಗಳು ಕೇಳಿಬರುತ್ತಿವೆ.

Edited By

Manjula M

Reported By

Manjula M

Comments