ಸಿ.ಎಂ ಕುಮಾರಸ್ವಾಮಿ ನಿವಾಸಕ್ಕೆ ಬಾಂಬ್ ..!!!

18 Dec 2018 5:37 PM | Politics
5587 Report

ರಾಜ್ಯದ ಮುಖ್ಯಮಂತ್ರಿಯಾದ  ಹೆಚ್ ಡಿ ಕುಮಾರಸ್ವಾಮಿ ಮನೆಗೆ ಬಾಂಬ್ ಹಾಕಲಾಗಿದೆ ಎಂದು ಯುವಕನೊಬ್ಬ ಕರೆ ಮಾಡಿದ್ದಾನೆ.. ಹುಸಿ ಬಾಂಬ್ ಕರೆ ಮಾಡಿದ್ದ ಯುವಕನನ್ನು ಜೆಪಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ..ನಿನ್ನೆ ರಾತ್ರಿ 9:40 ರ ವೇಳೆಗೆ ಜೆಪಿ ನಗರ ಇನ್ ಸ್ಪೆಕ್ಟರ್ ಗೆ ಕರೆ ಮಾಡಿದ ಯುವಕನೋರ್ವ ನನ್ನ ಹೆಸರು ಗೋಪಾಲ್, ಸಿ ಎಂ ಕುಮಾರಸ್ವಾಮಿ ಮನೆಗೆ ಬಾಂಬ್ ಇಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಈ ಕೂಡಲೇ ಎಚ್ಚೆತ್ತ ಪೊಲೀಸರು ಶ್ವಾನದಳ ಹಾಗೂ ಪೊಲೀಸ್ ಪಡೆಯೊಂದಿಗೆ ಜೆಪಿನಗರದಲ್ಲಿರುವ ಸಿಎಂ ನಿವಾಸಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವೇಳೆ ಯಾವುದೇ ಬಾಂಬ್ ಹಾಗೂ ಸ್ಪೋಟಕಗಳು ಪತ್ತೆಯಾಗಿಲ್ಲ. ನಂತರ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆ ಸಂಬಂಧ ಆರೋಪಿ ಮನ್ಸೂರ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.. ಈತ ಕರೆ ಮಾಡುವಾಗ ಪೊಲೀಸರ ದಾರಿ ತಪ್ಪಿಸಲೆಂದು ಗೋಪಾಲ್ ಎಂದು ಬೇರೆ ಹೆಸರು ಹೇಳಿದ್ದನು ಎನ್ನಲಾಗಿದೆ. ಇತ್ತಿಚಿಗೆ ಹುಸಿ ಬಾಂಬ್ ಕರೆ ಹೆಚ್ಚಾಗಿದೆ..

Edited By

Manjula M

Reported By

Manjula M

Comments