ದೋಸ್ತಿ ಸರ್ಕಾರದಲ್ಲಿ ಬಾರೀ ಸಂಚಲನ..!! ದೇವೆಗೌಡರ ತೀರ್ಮಾನವೇ ಅಂತಿಮ ತೀರ್ಮಾನ..!!!

14 Dec 2018 10:46 AM | Politics
4853 Report

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊನೆಗೂ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ಫಿಕ್ಸ್ ಆಗಿದೆ.. ಹಲವು ಬಾರಿ ಡೇಟ್ ಫಿಕ್ಸ್ ಆಗಿದ್ದರೂ ಕೂಡ ವಿವಿಧ ಕಾರಣ ಹೇಳಿ ಅದನ್ನು ಮುಂದೂಡುತ್ತಲೇ ಬಂದಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರು ಇದೀಗ ಡಿಸೆಂಬರ್ 22 ಕ್ಕೆ ಮುಹೂರ್ತ ನಿಗದಿಪಡಿಸಿದ್ದಾರೆ. ಸಂಪುಟ ವಿಸ್ತರಣೆಗೆ ದಿನಾಂಕ ಖಚಿತವಾಗುತ್ತಿದ್ದಂತೆಯೇ ಸಚಿವಾಕಾಂಕ್ಷಿ ಶಾಸಕರುಗಳ ಚಟುವಟಿಕೆ ಗರಿಗೆದರಿದೆ.

ಹೈಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವವನ್ನು ಬಳಸಿಕೊಂಡು ಕೆಲ ಕಾಂಗ್ರೆಸ್ ಶಾಸಕರು ಸಚಿವಗಿರಿಗಾಗಿ ಲಾಬಿ ಮಾಡುತ್ತಿದ್ದಾರೆ. ಇನ್ನು ಜೆಡಿಎಸ್ ನಲ್ಲಿ ದೇವೇಗೌಡರ ತೀರ್ಮಾನವೇ ಅಂತಿಮವಾಗಿದ್ದರೂ ಒತ್ತಡ ಹೇರುವ ಮೂಲಕ ಸಚಿವ ಸ್ಥಾನ ಪಡೆಯಲು ಜೆಡಿಎಸ್ ಶಾಸಕರುಗಳು ಮುಂದಾಗಿದ್ದಾರೆ. ಒಟ್ಟಾರೆ ಡಿಸೆಂಬರ್ 22 ಕ್ಕೆ ರಾಜಕೀಯ ವಲಯದಲ್ಲಿ ಬಾರೀ ಸಂಚಲನ ಆಗುವುದಂತು ನಿಜ..

Edited By

Manjula M

Reported By

Manjula M

Comments