ಸಚಿವ ಸ್ಥಾನ ಕಳೆದುಕೊಳ್ತಾರ ಜಮೀರ್..? ಈ ಬಗ್ಗೆ ಜಮೀರ್ ಅಹ್ಮದ್ ಹೇಳಿದ್ದೇನು..?

13 Dec 2018 3:34 PM | Politics
358 Report

ಇದೇ ಡಿಸೆಂಬರ್ 22 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಹೈ ಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ದ ಎಂದಿದ್ದಾರೆ.. ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಸಚಿವ ಸ್ಥಾನದಿಂದ ಕೈ ಬಿಟ್ಟರೂ ಸಹ ಅಲ್ಪ ಸಂಖ್ಯಾತರಿಗೆ 2 ಸ್ಥಾನ ನೀಡಬೇಕು ಎಂದು  ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್  ಖಾನ್ ತಿಳಿಸಿದ್ದಾರೆ.

ಡಿಸೆಂಬರ್ 22 ಕ್ಕೆ ಸಂಪುಟ ವಿಸ್ತರಣೆ ಆಗೇ ಆಗುತ್ತದೆ. ಹೆಚ್ಚುವರಿಯಾಗಿ ಖಾತೆ ಬದಲಾವಣೆ ಮಾಡಿದಲ್ಲಿ ತಮಗೆ ಯಾವುದೇ ಸಮಸ್ಯೆ ಇಲ್ಲ. ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ  80 ಸ್ಥಾನ ಬಂದಿದೆ ಎಂದರೆ ಅದಕ್ಕೆ ಅಲ್ಪಸಂಖ್ಯಾತ ಸಮುದಾಯವೂ ಕಾರಣ ಎಂದಿರುವ ಅವರು ಅಲ್ಪಸಂಖ್ಯಾತರಿಗೆ ಮಾನ್ಯತೆ ನೀಡಲು ಆಗ್ರಹ ಮಾಡಿದ್ದಾರೆ.

Edited By

Manjula M

Reported By

Manjula M

Comments