ಜೆಡಿಎಸ್ ಯುವನಾಯಕನಿಗೆ ಕಾದಿದೆಯಾ 'ಡೀಸಿ' ಬಿಸಿ..!?

13 Dec 2018 10:55 AM | Politics
427 Report

ಇತ್ತಿಚಿಗೆ ಭೂ ಕಬಳಿಕೆ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿವೆ..ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ವಿರುದ್ದದ ಭೂ ಕಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವರದಿ ನೀಡುವಂತೆ ಹಾಸನ ಜಿಲ್ಲಾಧಿಕಾರಿಗೆ ನ್ಯಾಯಾಲಯ ಸೂಚನೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ..

 ಪ್ರಜ್ವಲ್ ರೇವಣ್ಣ ಅಕ್ರಮ ಭೂ ಒತ್ತುವರಿ ಮಾಡಿದ್ದಾರೆಂದು ಕಾಂಗ್ರೆಸ್ ನಾಯಕ ಎ. ಮಂಜು ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರು ಭೂ ಕಬಳಿಕೆ ತಡೆ ನ್ಯಾಯಾಲಯ , ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ವರದಿ ಸಲ್ಲಿಸುವಂತೆ ಸೂಚಸಿದೆ. ಹಾಸನ ತಾಲೂಕಿನ ಸೋಮನಹಳ್ಳಿ ಕಾವಲಿನಲ್ಲಿ ಪ್ರಜ್ಷಲ್ ರೇವಣ್ಣ 69 ಎಕರೆ ಭೂ ಒತ್ತುವರಿ ಮಾಡಿದ್ದಾರೆಂದು ಮಂಜು ಆರೋಪ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಆಗಲೇ ನಮಗೆ‌ ಇದರ ಬಗ್ಗೆ ಸ್ಪಷ್ಟನೆ ‌ನೀಡಲಿಲ್ಲ. ಅದಕ್ಕಾಗಿ‌ ನ್ಯಾಯಾಲಯಕ್ಕೆ ಹೋಗಬೇಕಾಯ್ತು ಎಂದ ಮಾಜಿ ಸಚಿವ ಎ.ಮಂಜು ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.. ಈ ಆರೋಪದಿಂದ ಮುಕ್ತರಾಗ್ತಾರ ಅನ್ನೋದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments