ಬಿಜೆಪಿ ಮಕಾಡೆ ಮಲಗಿದರೂ ಬುದ್ದಿ ಕಲಿತಿಲ್ಲ…ಬಿಎಸ್‌ವೈ ಮತ್ತೆ ಸಿಎಂ ಆಗ್ತಾರಂತೆ..!! ಹೀಗ್ ಹೇಳಿದ್ದು ಯಾರ್ ಗೊತ್ತಾ..?

12 Dec 2018 2:46 PM | Politics
1215 Report

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ನೆನ್ನೆ ಅಷ್ಟೆ ಬಂದಿದೆ.. ಅದರಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸದರೆ ಬಿಜೆಪಿ ಮಕಾಡೆ ಮಲಗಿದೆ..  ಅಷ್ಟೆ ಅಲ್ಲದೆ ಬಿ.ಎಸ್​. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಪಂಚರಾಜ್ಯಗಳ ಚುನಾವಣೆಗೂ, ಕರ್ನಾಟಕಕ್ಕೂ ಸಂಬಂಧವಿಲ್ಲ ಅಂತ ಮಾಜಿ ಉಪಮುಖ್ಯಮಂತ್ರಿ, ಹಾಲಿ ಶಾಸಕ ಆರ್‌. ಅಶೋಕ್‌ ಹೇಳಿದ್ದಾರೆ.

ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ ಬಿಜೆಪಿಯ ಆಪರೇಷನ್ ಕಮಲ ಅದು ಪ್ರಕೃತಿ ನಿಯಮ. ಹಾಗಾಗಿ ಅದು ಆಗುತ್ತಲೇ ಇರುತ್ತದೆ. ಈಗಾಗಲೇ ಮುಗಿದಿದೆ, ನೋಡುತ್ತಿರಿ ಅಂತ ಹೇಳಿದರು.ಇನ್ನು ರಾಹುಲ್‌ ಗಾಂಧಿಯವರು ಯಾವುದೇ ಶ್ರಮವಿಲ್ಲದೆ ಲಾಟರಿಯಲ್ಲಿ ಗೆದ್ದ ಹಾಗೆ ಗೆದ್ದಿದ್ದಾರೆ. 15 ವರ್ಷಗಳ ಬಿಜೆಪಿ ಆಡಳಿತದ ವಿರೋಧಿ ಅಲೆ ಕೆಲವು ರಾಜ್ಯಗಳಲ್ಲಿ ಬಿಜೆಪಿ ಸೋಲುವುದಕ್ಕೆ ಕಾರಣವಾಗಿರ ಬಹದು ಅಂತ ಪಂಚರಾಜ್ಯಗಳಲ್ಲಿ ಬಿಜೆಪಿ ಸೋಲುವುದರ ಹಿಂದಿನ ಕಾರಣವನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದರು. ಬಿಎಸ್ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಅಶೋಕ್ ತಿಳಿಸಿದ್ದಾರೆ.

Edited By

Manjula M

Reported By

Manjula M

Comments