ಬಿಜಿಪಿ ನಾಯಕನಿಗೆ ಸಖತ್ತಾಗಿ ಟಾಂಗ್​ ಕೊಟ್ಟ ದೋಸ್ತಿ ಸರ್ಕಾರದ ಈ ಚಾಣಕ್ಯ...!!!

04 Dec 2018 1:31 PM | Politics
325 Report

ಪಿಎ ಸುರ್ಜಿತ್​ ಅವರು ನನ್ನ ಪಿ.ಎ ಅಲ್ಲ, ಶ್ರೀರಾಮುಲು ಅಣ್ಣನವರ ಪಿಎ ಎಂದು ಹೇಳಿದ್ದಾರೆ. ತನ್ನ ಪಿಎ ಅಲ್ಲ ಎಂದೇಳುವ ಶ್ರೀರಾಮುಲು ಹಗಲು-ರಾತ್ರಿ ಸರ್ಜಿತ್​ ಅವರನ್ನುತನ್ನ ಹಿಂದೆಯೇ ಸುತ್ತಾಡಿಸುತ್ತಾರೆ. ಅಲ್ಲದೇ ಅವರು ನನ್ನ ಪಿಎ ಎಂದು ಊರು ಸುತ್ತಾ ಹೇಳಿಕೊಂಡು ತಿರುತ್ತಾರೆ. ಇರೋದು ಅವರ ಬಳಿ,ಹೆಸರು ನನ್ನೊಂದಿಗೆ ಬಳಸುತ್ತಾರೆ ಎಂದು ರಾಮುಲುಗೆ ಡಿಕೆಶಿ ಭರ್ಜರಿ ಟಾಂಗ್​ ನೀಡಿದ್ದಾರೆ.

ಅವರು ಇಂದು ಸದಾಶಿವನಗರದ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು, ಇದೇ ವೇಳೆ ಅವರುಮಾತನಾಡಿ ಶಾಸಕ ಅಶ್ವಥ್ ನಾರಾಯಣ ಮೂರು ದಿನದ ಹಿಂದೆ ಬ್ರಿಗೇಡ್ ಟವರ್​ನಲ್ಲಿ ಯಾರನ್ನು ಭೇಟಿ ಮಾಡಿದ್ದರು ಎಂದು ಹೇಳಲಿ? ಜನಾರ್ದನ ರೆಡ್ಡಿ ನಿನ್ನೆ ರಾತ್ರಿ ಜಿಂದಾಲ್ ಆಸ್ಪತ್ರೆಯಲ್ಲಿ ಸುಧಾಕರ್​ರನ್ನು ಯಾಕೆ ಭೇಟಿ ಮಾಡಿದರು ಎಂದು ಹೇಳಲಿ? ಬೇಕಾದರೆ ಅವರು ಇನ್ನೂ ನೂರು ಜನರನ್ನು ಭೇಟಿ ಮಾಡಲಿ, ನೂರಾರು ಕೋಟಿ ಆಫರ್ ಮಾಡಲಿ. ಕಣ್ಣು ಮುಚ್ಚಿಕೊಂಡು ಹಾಲು ಕುಡಿದ್ರೆ ಜಗತ್ತಿಗೆ ಗೊತ್ತಾಗೋದಿಲ್ವಾ ಅಂತ ವ್ಯಂಗ್ಯವಾಡಿದರು.

Edited By

Manjula M

Reported By

Manjula M

Comments