ಎಚ್ ಡಿ ಕುಮಾರಸ್ವಾಮಿಯಿಂದ ಮತ್ತೊಂದು ಸೇವೆಗೆ ಚಾಲನೆ..!

17 Nov 2018 10:33 AM | Politics
868 Report

ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಸೇರಿದಂತೆ ಎಲ್ಲ ಸೇವೆಗಳನ್ನು ಆ‌ನ್‌ಲೈನ್ ಮೂಲಕ ಒದಗಿಸುವ “ಕಾವೇರಿ ಆನ್‌ಲೈನ್ ಸೇವೆ”ಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಲೋಕಾರ್ಪಣೆಗೊಳಿಸಿದರು.

ಆಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ ಸೇರಿದಂತೆ ಸ್ಥಿರಾಸ್ತಿಗಳ ವ್ಯವಹಾರಗಳನ್ನು ಇಲಾಖೆಯು ನಿರ್ವಹಿಸುತ್ತದೆ. ಸರ್ಕಾರ ನೀಡುವ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗಬಾರದು ಎಂಬ ಉದ್ದೇಶದಿಂದ ಇಂತಹ ಸೇವೆಗಳನ್ನು ಪರಿಚಯಿಸಲಾಗುತ್ತಿದೆ. ಮುಂದಿನ ದಿನದಲ್ಲಿ ತಂತ್ರಜ್ಞಾನದ ನೆರವಿನಿಂದ ಮತ್ತಷ್ಟುಪಾರದರ್ಶಕ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಎಚ್ ಡಿ ಕುಮಾರಸ್ವಾಮಿ ಮಾತನಾಡಿ ಸಾರ್ವಜನಿಕರು ನೋಂದಣಿಗೆ ಸಂಬಂಧಿಸಿದ ಕೆಲಸಗಳನ್ನು ಕಚೇರಿಗೆ ಬಂದು ಮಾಡುವ ಬದಲು ಆನ್‌ಲೈನ್‌ ಮೂಲಕವೇ ಮಾಡಬಹುದಾಗಿದೆ. ಸ್ಥಿರಾಸ್ತಿಗಳ ಋುಣಭಾರ, ಪ್ರಮಾಣ ಪತ್ರ ಆಸ್ತಿಗಳ ನೋಂದಣಿಗೆ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಈ ಆನ್‌ಲೈನ್ ಮೂಲಕ ಸಮಯವನ್ನು ನಿಗದಿ ಮಾಡಬಹುದು. ಜತೆಗೆ ವಿವಿಧ ಸ್ಥಿರಾಸ್ತಿಗಳು ಯಾರ ಹೆಸರಿನಲ್ಲಿ ನೋಂದಾಯಿತವಾಗಿವೆ. ಅದರ ವಿವರಗಳ ದೃಢೀಕೃತ ನಕಲನ್ನು ಪಡೆಯಬಹುದು. ನೋಂದಣಿ ಇತರೆ ಕೆಲಸಗಳಿಗೆ ಆನ್‌ಲೈನ್‌ ಮೂಲಕವೇ ಅಗತ್ಯ ದಾಖಲೆಗಳನ್ನು ನೀಡಿ ನೊಂದಣಿ ಮಾಡಿಕೊಳ್ಳಬಹುದಾಗಿದೆ. ರಾಜ್ಯದ ಜನರಿಗೆ ಈ ಯೋಜನೆಯು ಹೆಚ್ಚು ಉಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟಅವರು, ರೈತರ ಸಾಲಮನ್ನಾ ವಿಚಾರದಲ್ಲಿ ಅಗತ್ಯ ಮಾಹಿತಿ ಕಲೆಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯ ಪಾತ್ರವು ಸಹ ಪ್ರಮುಖವಾಗಿದೆ. ಸೆಲ್‌ಗಳನ್ನು ಸ್ಥಾಪಿಸಿ ಸರ್ಕಾರ ಮತ್ತು ರೈತರ ನಡುವೆ ಇರುವ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಜನರಿಗೆ ಸೌಲಭ್ಯ ಕಲ್ಪಿಸಲು ಇ-ಸೇವೆ ಅನುಕೂಲವಾಗಲಿದೆ ಎಂದರು.

 

Edited By

venki swamy

Reported By

venki swamy

Comments