ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್

15 Nov 2018 11:11 AM | Politics
4593 Report

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಮೊದಲ ʼರೈತ ಸ್ಪಂದನʼ ಕಾರ್ಯಕ್ರಮಕ್ಕೆ ಇಂದು ಬೀದರ್ ನಲ್ಲಿ ಚಾಲನೆ ನೀಡಲಿದ್ದಾರೆ.

ರೈತ ಸ್ಪಂದನದ ಮುಖ್ಯ ಆಶಯ ರೈತರ ಮನದಲ್ಲಿ ಕೃಷಿ ಒಂದು ಲಾಭದಾಯಕ ಉದ್ಯಮ ಎಂಬ ಭಾವನೆ ಮೂಡಿಸುವುದು, ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಯಯಲ್ಲಿ ʼಭತ್ತ ನಾಟಿʼ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿಗಳು ಇದರ ಮುಂದುವರೆದ ಭಾಗವಾಗಿ ಇಂದು ಮಧ್ಯಾಹ್ನ 2.30ಕ್ಕೆ ಬೀದರ್ ಜಿಲ್ಲೆಯ ಚಿಟ್ಟಾ ಗ್ರಾಮದ ಪ್ರಗತಿಪರ ರೈತರ ತೋಟಕ್ಕೆ ಭೇಟಿ ನೀಡಲಿದ್ದಾರೆ.
ಇಂದು ಸಂಜೆ ಬೀದರ್ ನ ರಂಗಮಂದಿರದಲ್ಲಿ ಆಯೋಜಿಸಿರುವ ರೈತ ಸ್ಪಂದನ ಕಾರ್ಯಕ್ರಮದಲ್ಲಿ ರೈತರೊಂದಿಗೆ ಎಚ್ ಡಿ ಕೆ ಸಂವಾದ ನಡೆಸುವರು.

Edited By

venki swamy

Reported By

venki swamy

Comments