ರಾಮನಗರ ಬಿಜೆಪಿ ಅಭ್ಯರ್ಥಿ ಅಖಾಡದಿಂದ ಹಿಂದೆ ಸರಿದಿರುವುದಕ್ಕೆ ರೆಬಲ್ ಸ್ಟಾರ್  ಹೇಳಿದ್ದೇನು ಗೊತ್ತಾ..!?

01 Nov 2018 5:49 PM | Politics
1003 Report

ಚುನಾವಣೆಯ ಕಣ ದಿನದಿಂದ ದಿನಕ್ಕೆ ಚುನಾವಣೆಯ ಕಾವು ಹೆಚ್ಚಾಗಿದ್ದು ಇಂದಿಗೆ ಬಹಿರಂಗ ಪ್ರಚಾರ ಮುಗಿಸಿದೆ.. ಉಪಚುನಾವಣೆ ನಡೆಯಲು ಕೇವಲ ಎರಡು ದಿನ ಬಾಕಿ ಇರುವಾಗ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್, ದಿಢೀರ್ ಆಗಿ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿ ಮೈತ್ರಿಕೂಟದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಯವರನ್ನು ಬೆಂಬಲಿಸುವುದಾಗಿ ಹೇಳಿಕೆಯನ್ನು ನೀಡಿದ್ದಾರೆ..

ಚಂದ್ರಶೇಖರ್ ಅವರ ಈ ತೀರ್ಮಾನಕ್ಕೆ ಸ್ವತಃ ಅವರ ತಂದೆ ಲಿಂಗಪ್ಪನವರೇ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಯಾರೇ ಆಗಲಿ ಈ ರೀತಿ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಮಾಧ್ಯಮಗಳ ಮುಂದೆ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಿದ್ದಾರೆ.. ಇದೇ ಹಿನ್ನಲೆಯಲ್ಲಿ ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್ ಕೂಡಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಚಂದ್ರಶೇಖರ್ ಚುನಾವಣಾ ಕಣದಿಂದ ಏಕಾಏಕಿ ಹಿಂದೆ ಸರಿದಿರುವುದು ಒಳ್ಳೆಯದಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಂಬರೀಶ್ ಅವರು ಹೇಳಿದ್ದಾರೆ..

Edited By

Manjula M

Reported By

Manjula M

Comments