ಲಕ್ಷ್ಮಿ ಹೆಬ್ಬಾಳ್ಕರ್’ಗೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನದಿಂದ ಕೊಕ್..!?

25 Oct 2018 4:22 PM | Politics
439 Report

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನದಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೆಳಗಿಳಿಸುವಂತೆ ಕಾಂಗ್ರೆಸ್‍ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಹೈಕಮಾಂಡ್‍ ಮಟ್ಟದಲ್ಲಿ ಈಗಾಗಲೇ ಸಭೆಗಳು ಪ್ರಾರಂಭವಾಗಿವೆ. ಲಕ್ಷ್ಮಿ ಹೆಬ್ಬಾಳ್ಕರ್‍ ಅವರನ್ನು ಶೀಘ್ರದಲ್ಲೇ ಬದಲಿಸಬೇಕೆಂದು ಮಹಿಳಾ ಕಾಂಗ್ರೆಸ್‍ ಮುಖಂಡರು ಹೈಕಮಾಂಡ್‍ ಮಟ್ಟದಲ್ಲಿ ಹೋರಾಟ ಪ್ರಾರಂಭಿಸಿದ್ದು , ಈಗಾಗಲೇ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಮುಂದೆ ತಮ್ಮ ದೂರು ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯದ 12 ಮಂದಿ ಮಹಿಳಾ ನಾಯಕಿಯರು ಈಗಾಗಲೇ ದಿಲ್ಲಿಗೆ ತೆರಳಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ದೂರು ನೀಡಿದ್ದಾರೆ. ನಿನ್ನೆ ರಾಜ್ಯದ 9 ಮಹಿಳಾ ಕಾಂಗ್ರೆಸ್ ಮುಖಂಡರು ದಿಲ್ಲಿಗೆ ತೆರಳಿದ್ದರೆ, ಇಂದು ಇನ್ನೂ ಮೂರು ಮಂದಿ ಹೋಗಿದ್ದಾರೆ. ಪುಷ್ಪ ಅಮರ್ ನಾಥ್, ನಾಗಲಕ್ಷ್ಮಿ ಚೌಧರಿ, ಕಮಲಾಕ್ಷಿ ರಾಜಣ್ಣ, ಶಾರದಾ ಗೌಡ, ಗೀತ ರಾಜಣ್ಣ ಸೇರಿದಂತೆ ಇನ್ನೂ 12 ಜನ ಮಹಿಳಾ ನಾಯಕಿಯರು ದಿಲ್ಲಿಗೆ ಭೇಟಿ ಕೊಟ್ಟಿದ್ದಾರೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಒಟ್ಟಾರೆಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಕೆ ಸ್ಧಾನದಿಂದ ಕೆಳಗಿಳಿಸಲು ಒತ್ತಡ ಹೆಚ್ಚಾಗಿದೆ ಎನ್ನುವಂತಾಗಿದೆ.

Edited By

Manjula M

Reported By

Manjula M

Comments