ಮಧು ಬಂಗಾರಪ್ಪನವರಿಗೆ ಸಿಕ್ಕಿದೆಯಂತೆ ಆನೆ ಬಲ..! ಕಾರಣ..?

23 Oct 2018 11:15 AM | Politics
390 Report

ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಛಾಗುತ್ತಲೆ ಇದೆ.. ಶಿವಮೊಗ್ಗ ಕ್ಷೇತ್ರದಲ್ಲಿ ಮಧು ಬಂಗಾರಪ್ಪನವರನ್ನು ಅಖಾಡಕ್ಕೆ ಇಳಿಸಿರುವುದು ಎಲ್ಲರಿಗೂ ಕೂಡ ತಿಳಿದೆ ಇದೆ.ಇದೀಗ  ಕೆಪಿಸಿಸಿ ಅಧ್ಯಕ್ಷರೇ ನನ್ನ ಪರವಾಗಿ ಪ್ರಚಾರ ಮಾಡುತ್ತಿರುವುದು ಮತ್ತು ಮುಖಂಡರ ಸಭೆಗೆ ಆಗಮಿಸಿದ್ದರಿಂದ ನನಗೆ ಆನೆ ಬಲ ಬಂದಂತಾಗಿದೆ ಎಂದು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ  ಮಧು ಬಂಗಾರಪ್ಪ ತಿಳಿಸಿದ್ದಾರೆ.

ಉಪಚುನಾವಣೆ ಪ್ರಚಾರಕ್ಕೆ ಎರಡು ಪಕ್ಷಗಳ ನಾಯಕರು ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ, ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ. ದೇವೇಗೌಡರು, ಡಿಕೆಶಿ, ಆರ್ ವಿ ದೇಶಪಾಂಡೆ ಹೀಗೆ ಹಲವು ನಾಯಕರು ನನ್ನ ಪರ ಪ್ರಚಾರ ಮಾಡಲಿದ್ದಾರೆ ಎಂದರು ಹಾಗೂ ತಮ್ಮ ತಂದೆ ಬಂಗಾರಪ್ಪರ ಶ್ರೀ ರಕ್ಷೆಯೇ ನನಗೆ ಬಲ.. ನಾಣು ಗೆದ್ದೆ ಗೆಲ್ಲುತ್ತೇನೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

Edited By

Manjula M

Reported By

Manjula M

Comments