ಬಿಜೆಪಿಗೆ ಹೋಗ್ತಾರ ಈ ಪ್ರಭಾವಿ ಶಾಸಕಿ..!?

28 Sep 2018 4:04 PM | Politics
380 Report

ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ವಿಚಾರ ಕುರಿತಂತೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಕೇಂದ್ರ ಬಿಂದುವಾಗಿದ್ದರು. ಈ ನಡುವೆ ಬಿಜೆಪಿ ಪಕ್ಷಕ್ಕೆ ಹೋಗುವ ಬಗ್ಗೆ ಸ್ಟೋಟಕ ಮಾಹಿತಿಯನ್ನು ಕೂಡ ಬಿಚ್ಚಿಟ್ಟಿದ್ದಾರೆ.  

ಅವರು ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಮದಿಗೆ = ಮಾತನಾಡಿ ನನಗೂ ಕೂಡ 30 ಕೋಟಿ ಆಮಿಷವನ್ನು ಹಾಗೂ ಸಚಿವ ಸ್ಥಾನವನ್ನು ನೀಡುವ ಆಫರ್ ಅನ್ನು ನೀಡಿದ್ದರು. ಆದರೆ ನಾನು  ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ ಅಂತ ಹೇಳಿದ್ದೆ. ಇದೇ ವೇಳೆ ಅವರು ನನಗೆ ಬಂದಿರುವ ಆಫರ್ ಗಳ ಬಗ್ಗೆ ಮೆಸೆಜ್ ಗಳನ್ನು ನನ್ನ ಪಕ್ಷದ ನಾಯಕರುಗಳಿಗೆ ಈ ಬಗ್ಗೆ ತೋರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ಟಾಂಗ್ ನೀಡಿ ಯಾವುದೋ ಒಂದು ಕಡೆಯಲ್ಲಿ ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗಿ ಬಂದಿದ್ದಾರೆ ಎಂದು ಯಾರೊ ಮಾತನಾಡುತ್ತಿದ್ದರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಗೆ ಒಂದು ಲಕ್ಷ ಮತಗಳನ್ನು ನೀಡೋಣ, ಅವಾಗ ಗೊತ್ತಾಗುತ್ತೆ ಯಾರು ಗಟ್ಟಿ ಎಂದು ಕಾರಿದರು.

Edited By

Manjula M

Reported By

Manjula M

Comments