ವಿಧಾನಪರಿಷತ್‌ ಚುನಾವಣೆಗೆ 'ಕೈ' ಪಕ್ಷದಿಂದ ಅಖಾಡಕ್ಕಿಳಿಯಲಿರುವ ಈ ಪ್ರಭಾವಿ ನಾಯಕರು

24 Sep 2018 9:34 AM | Politics
299 Report

ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ಅ.4 ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್‌ ನ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮಾಜಿ ಸಚಿವ ನಸೀರ್‌ ಅಹಮದ್‌ ಹಾಗೂ ಎಂ.ಸಿ.ವೇಣುಗೋಪಾಲ್‌ ಅವರನ್ನು ಅಧಿಕೃತವಾಗಿ ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.

ನಸೀರ್‌ ಅಹಮದ್‌ ಅವರು ಈ ಹಿಂದೆ ಬಿನ್ನಿಪೇಟೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ ಬಂಗಾರಪ್ಪ ಅವರ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿದ್ದರು. ನಂತರ ಸ್ಥಳೀಯ ಸಂಸ್ಥೆಗಳಿಂದ ಎರಡು ಬಾರಿ ಕೋಲಾರ-ಚಿಕ್ಕಬಳ್ಳಾಪರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದರು.ಎಂ.ಸಿ.ವೇಣುಗೋಪಾಲ್‌ 2013ರ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿ
ಸೋಲು ಅನುಭವಿಸಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ ಅವರಿಗೆ ಅಲ್ಲಿ ಟಿಕೆಟ್‌ ನೀಡಿದ್ದರಿಂದ ಇವರಿಗೆ ಟಿಕೆಟ್‌ ತಪ್ಪಿತ್ತು. ಅಲ್ಪಸಂಖ್ಯಾತರ ಕೋಟಾದಡಿ ನಸೀರ್‌ಅಹಮದ್‌,ಹಿಂದುಳಿದ ಕೋಟಾದಡಿ ಸವಿತಾ ಸಮುದಾಯದ ಎಂ.ಸಿ. ವೇಣುಗೋಪಾಲ್‌ ಅವರಿಗೆ ಅವಕಾಶ ನೀಡಲಾಗಿದೆ.

Edited By

Shruthi G

Reported By

Shruthi G

Comments