ಸಚಿವ ಸಂಪುಟ ವಿಸ್ತರಣೆಗೆ ಕೂಡಿ ಬಂತು ಮೂಹೂರ್ತ..!ಜೆಡಿಎಸ್ ಉಳಿಸಿಕೊಂಡಿರುವ ಸ್ಥಾನಕ್ಕೆ ಈ ಅಭ್ಯರ್ಥಿ ಫಿಕ್ಸ್..!!

01 Sep 2018 11:41 AM | Politics
485 Report

ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದಂತಾಗಿದೆ. ಸಚಿವ ಸಂಪುಟ ವಿಸ್ತರಣೆಗೆ ಮೂಹೂರ್ತ  ಕೂಡಿ ಬಂದಿದ್ದು ಸೆಪ್ಟಂಬರ್ 3ನೇ ವಾರ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗುತ್ತಿದೆ. ಸಮನ್ವಯ ಸಮಿತಿ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದು ಹಲವು ನಾಯಕರು ಮುಂಚೂಣಿಯಲ್ಲಿದ್ದಾರೆ.  ಇದೇ ಸಂದರ್ಭದಲ್ಲಿ ಜೆಡಿಎಸ್ ಉಳಿಸಿಕೊಂಡಿರುವ ಒಂದು ಖಾತೆಯನ್ನು ಕೂಡ ಭರ್ತಿ ಮಾಡಲಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲೂ ಸಚಿವ ಸಂಪುಟದ ಬಗ್ಗೆ ಚರ್ಚೆಯಾಗಲಿದೆ, ಜೊತೆಗೆ ನಿಗಮ ಮಂಡಳಿ ಅಧ್ಯಕ್ಷರು ಉಪಾಧ್ಯಕರು, ನಿರ್ಧೇಶಕರ ನೇಮಕದ ಬಗ್ಗೆಯೂ ಚರ್ಚೆಯಾಗಲಿದೆ. ಸೆಪ್ಟಂಬರ್ ಮೂರನೇ ವಾರ ನಿಗಮಕ್ಕೆ ನೇಮಕ ಮಾಡುವ ತಿರ್ಮಾನವನ್ನು ಎರಡು ಪಕ್ಷದ ನಾಯಕರು ತೆಗೆದುಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಸಮನ್ವಯ ಸಮಿತಿ ಸಭೆ ನಡೆಯಿತು…ಈಗಾಗಲೇ ಸಚಿವ ಸ್ಥಾನಕ್ಕೆ ಕಾಂಗ್ರೆಸ್ ನ ಶಾಸಕರು ಕ್ಯೂ ನಲ್ಲಿ ನಿಂತಿದ್ದಾರೆ.ಅವರಲ್ಲಿ ರಾಮಲಿಂಗ ರೆಡ್ಡಿ,ಎಂಬಿ ಪಾಟೀಲ್ ಭದ್ರವತಿಯ ಸಂಗಮೇಶ್ ಕುಂದಗೋಳ ಶಾಸಕ ಸಿಎಸ್ ಶಿವಳ್ಳಿ ಸೇರಿದಂತೆ ಇನ್ನೂ ಹಲವರ ಹೆಸರು ಮುಂಚೂಣಿಯಲ್ಲಿವೆ. ಜೆಡಿಎಸ್ ಉಳಿಸಿಕೊಂಡಿರುವ ಒಂದು ಸ್ಥಾನಕ್ಕೆ ಮೂರು ಜನ ಆಕಾಂಕ್ಷಿಗಳಿದ್ದು ಅವರಲ್ಲಿ ಫಾರೂಕ್ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

Edited By

Manjula M

Reported By

Manjula M

Comments