ರಾಜ್ಯದಲ್ಲಿ ಆಗಲಿದೆ ಮತ್ತೊಂದು ಮೈತ್ರಿ: ಸಿಎಂ ಎಚ್’ಡಿಕೆ ಈ ಬಗ್ಗೆ ಹೇಳಿದ್ದೇನು..!?

01 Sep 2018 9:33 AM | Politics
335 Report

ಈಗಾಗಲೇ ವಿಧಾನ ಸಭಾ ಚುನವಣೆಯ ಫಲಿತಾಂಶದ ಹಿನ್ನಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದೆ. ಇದೀಗ ರಾಜ್ಯದ ಸಿಎಂ ಕುಮಾರಸ್ವಾಮಿಯವರು ಮತ್ತೊಂದು ಮೈತ್ರಿ ಆಗಲಿದೆ ಎಂಬ ಮಾತನ್ನು ಹೇಳಿದ್ದಾರೆ.  

ಮೈಸೂರು, ಶಿವಮೊಗ್ಗ, ತುಮಕೂರು ನಗರ ಪಾಲಿಕೆ, ನಗರ ಸಭೆಗಳು, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ಸೇರಿದಂತೆ 105 ಸ್ಥಳೀಯ ಸಂಸ್ಥೆಗಳಿಗೆ ನಿನ್ನೆ ನಡೆದಿರುವ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಕಡೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳಲು ಸಮನ್ವಯ ಸಮಿತಿ ಸಭೆಯಲ್ಲಿ ಈಗಾಗಲೇ ತಿರ್ಮಾನ ಮಾಡಿಕೊಂಡಿದೆ. ಕಾಂಗ್ರೆಸ್‌ಗೆ ಬಹುಮತ ಬರುವ ಕಡೆ ಕಾಂಗ್ರೆಸ್‌ ಅಧಿಕಾರ ರಚಿಸಲಿದೆ. ಜೆಡಿಎಸ್‌ ಬಹುಮತ ಬರುವ ಕಡೆ ಜೆಡಿಎಸ್‌ ಆಡಳಿತ ರಚಿಸುತ್ತದೆ. ಅತಂತ್ರ ಸ್ಥಿತಿ ನಿರ್ಮಾಣವಾದ ಕಡೆ ಕಾಂಗ್ರೆಸ್‌-ಜೆಡಿಎಸ್‌ ಕೂಡಿ ಆಡಳಿತ ನಡೆಸಲು ತೀರ್ಮಾನ ಕೈಕೊಳ್ಳುತ್ತೇವೆ ಎಂದು ಸಿಎಂ ಕುಮಾರಸ್ವಾಮಿಯವರು ತಿಳಿಸಿದ್ದಾರೆ.

Edited By

Manjula M

Reported By

Manjula M

Comments