ಮಾಜಿ ಸಂಸದೆ ರಮ್ಯಾ ಮತದಾನ ಮಾಡಲು ಬರಲೇಬೇಕು : ಪಟ್ಟು ಹಿಡಿದ ಮಂಡ್ಯ ಜನತೆ..!!

31 Aug 2018 10:52 AM | Politics
351 Report

ಈಗಾಗಲೇ ನಗರ ಸಭೆ ಚುನಾವಣೆಗೆ ಮತದಾನ ಪ್ರಾರಂಭವಾಗಿದ್ದು, ಮಾಜಿ ಸಂಸದೆ ರಮ್ಯಾ ಅವರು ಮತದಾನ ಮಾಡಲು ಬರಲೇಬೇಕು ಎಂದು ಸಾರ್ವಜನಿಕರು ರಮ್ಯಾ ಅವರಿಗೆ ಆಗ್ರಹಿಸಿದ್ದಾರೆ.

ಮಂಡ್ಯಗೆ ನಗರಸಭೆ ಚುನಾವಣೆಗೆ ಮತ ಹಾಕಲು ನೀವು ಬರದಿದ್ದರೆ ಮತ ಕೇಳಲು ಕೂಡ ಬರಬೇಡಿ ಎಂದು ಮಂಡ್ಯ ಜನತೆ ಮಾಜಿ ಸಂಸದೆ ರಮ್ಯಾಗೆ ಎಚ್ಚರಿಕೆ ಕೊಟ್ಟಿದ್ದಾರೆ. ಮಂಡ್ಯದ ವಿದ್ಯಾನಗರದ ಮತಗಟ್ಟೆ ಸಂಖ್ಯೆ 168 ರಲ್ಲಿ ರಮ್ಯಾ ಮತದಾನ ಮಾಡಬೇಕಿತ್ತು. ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 420 ರಲ್ಲಿದ್ದ ರಮ್ಯಾ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡದೆ ಮಾಜಿ ಸಂಸದೆ ರಮ್ಯಾ ಅವರು ಟೀಕೆಗೆ ಗುರಿಯಾಗಿದ್ದರು. ಹೀಗಾಗಿ ಇಂದು ಮಂಡ್ಯ ನಗರಸಭೆ ಚುನಾವಣೆ ನಡೆಯುತ್ತಿದ್ದು, 11 ನೇ ವಾರ್ಡ್ ನಲ್ಲಿ ರಮ್ಯಾ ಮತದಾನ ಮಾಡಬೇಕಿದೆ. ಒಂದು ವೇಳೆ ಮತದಾನ ಮಾಡಲು ರಮ್ಯಾ ಬರದೆ ಹೋದರೆ ನಾವು ಅವರಿಗೆ ಮತ ಹಾಕುವುದಿಲ್ಲ ಎಂದು ಮಂಡ್ಯ ಜನತೆ ಹೇಳಿದ್ದಾರೆ.

Edited By

Manjula M

Reported By

Manjula M

Comments