ಮೈತ್ರಿ ಸರ್ಕಾರಕ್ಕೆ ಇಂದಿಗೆ 100 ದಿನ : ಸಿಎಂ ಕುಮಾರಸ್ವಾಮಿ ಕೊಡ್ತಾರಂತೆ ಹೊಸ ಯೋಜನೆ..!!

30 Aug 2018 10:50 AM | Politics
1144 Report

ವಿಧಾನಸಭಾ ಚುನಾವಣೆಯ ನಡೆದು ಅದರ ಫಲಿತಾಂಶ ಬಂದ ಮೇಲೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಇದೀಗ ಸರ್ಕಾರ ರಚನೆಯಾಗಿ ಇಂದಿಗೆ ನೂರು ದಿನ ಕಳೆದಿದೆ.

ಇಂದಿಗೆ ನೂತನ ಮೈತ್ರಿ ಸರ್ಕಾರವು ನೂರು ದಿನ ಪೂರೈಸಲಿದೆ. ಇದರ ಅಂಗವಾಗಿ ನೂತನವಾಗಿ ಹೊಸ ಯೋಜನೆಗಳನ್ನ ಅನುಷ್ಠಾನಕ್ಕೆ ತರಲು ಚಿಂತನೆ ನಡೆಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೈಲಾಂಚ, ಸುಗ್ಗನಗಳ್ಳಿ, ಹಾರೋಹಳ್ಳಿ, ದೊಡ್ಡಮರಳವಾಡಿಯಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ, ದೂರುಗಳನ್ನು ಸ್ವೀಕರಿಸಿದರು. ನಂತರ ಮಾತಾಡಿದ  ಸಿಎಂ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರಕ್ಕೆ ನೂರು ದಿನ ತುಂಬಲಿದ್ದು, ಹೊಸ ಯೋಜನೆಗಳನ್ನ ರೂಪಿಸಿ, ಜಾರಿಗೆ ತರಬೇಕಾಗಿದೆ. ಸೆಪ್ಟೆಂಬರ್ ತಿಂಗಳಿಂದ ಅವುಗಳನ್ನ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಜೊತೆಗೆ ಸಮಯ ವ್ಯರ್ಥ ಮಾಡದೇ ರಾಜ್ಯದ ಅಭಿವೃದ್ಧಿಗೆ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ ಎಂದು ತಿಳಿಸಿದರು..

Edited By

Manjula M

Reported By

Manjula M

Comments