ಜೆಡಿಎಸ್‌ ಟಾರ್ಗೆಟ್‌ಗೆ ‘ಕೈ’ ಪಕ್ಷದಲ್ಲಿ ಮೂಡಿದೆ ಭಾರೀ ಆತಂಕ..!!

30 Aug 2018 9:35 AM | Politics
1169 Report

ಮೈತ್ರಿ ಸರ್ಕಾರದಲ್ಲಿ ಹುಟ್ಟಿಕೊಂಡಿರುವ ಒಳ ಜಗಳಕ್ಕೆ  ಮೂಲ ಕಾರಣ ಜೆಡಿಎಸ್‌ನ ಟಾರ್ಗೆಟ್‌ 70 ಸೂತ್ರ ಎಂದು ಕಾಂಗ್ರೆಸ್‌ ಪಕ್ಷದ ಉನ್ನತ ಮೂಲಗಳು ಹೇಳುತ್ತಿವೆ. ಈ ಮೂಲಗಳ ಪ್ರಕಾರ ಜೆಡಿಎಸ್‌ ನಾಯಕರು ನಡೆಸುತ್ತಿರುವ ಎಪ್ಪತ್ತರ ಆಟಕ್ಕೆ ಹಲವು ಕಾಂಗ್ರೆಸ್‌ ಶಾಸಕರು ತಬ್ಬಿಬ್ಬಾಗಿದ್ದಾರೆ. ಒಂದು ವೇಳೆ ಈ ಸೂತ್ರವನ್ನು ಯಶಸ್ವಿಯಾಗಲು ಬಿಟ್ಟರೆ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಕಾಯಂ ಎರಡನೇ ಸ್ಥಾನಕ್ಕೆ ಕುಸಿದು ಬೀಳಲಿದ್ದು,  ಅಧಿಕಾರ ಪಡೆಯಲು ಜೆಡಿಎಸ್‌ ಆಶ್ರಯ ಅನಿವಾರ್ಯವಾಗುವಂತಹ ಸನ್ನಿವೇಶ ಭವಿಷ್ಯದಲ್ಲೂ ನಿರ್ಮಾಣವಾಗಬಹುದು ಎಂಬ ಭಯ ಒಳಗೊಳಗೆ ಕಾಂಗ್ರೆಸ್‌ ನಾಯಕರುಗಳಿಗೆ ಹುಟ್ಟಿಕೊಂಡಿದೆ.

ಈ ಕಾರಣಕ್ಕಾಗಿಯೇ ಕಾಂಗ್ರೆಸ್‌ನ ಒಂದು ದಂಡು, ಜೆಡಿಎಸ್‌ನ ಈ ಟಾರ್ಗೆಟ್‌ 70 ಕಾರ್ಯಯೋಜನೆಯನ್ನು ವಿಫಲಗೊಳಿಸುವ ಪ್ರಯತ್ನವನ್ನು ಮಾಡುತ್ತಿದೆ. ಅದೇ ರೀತಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಜೆಡಿಎಸ್‌ ತಳಮಟ್ಟದಲ್ಲಿ ನಡೆಸಿರುವ ಒಳತಂತ್ರಗಳು ಮನದಟ್ಟಾಗುವಂತೆ ಮಾಡಲು ಮುಂದಾಗಿದೆ. ಇಂತಹದೊಂದು ಪ್ರಯತ್ನ ಕಾಂಗ್ರೆಸ್‌ ನಾಯಕತ್ವದಿಂದ ಪ್ರಾರಂಭವಾಗಿರುವುದರ ಅಡ್ಡ ಪರಿಣಾಮವೇ ಆಗಿದೆ.  

ಏನಿದು ಟಾರ್ಗೆಟ್‌ 70

ಅಂದರೆ, ಜೆಡಿಎಸ್‌ 70 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಸ್ಥಳೀಯ ನಾಯಕತ್ವವನ್ನು ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಬೆಳೆಸುವ ಕಾರ್ಯತಂತ್ರವಾಗಿದೆ. ಇದರ  ಉದ್ದೇಶ- ಈ ನಾಯಕತ್ವವನ್ನು ಪ್ರಬಲಗೊಳಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ತನ್ನ ಸಂಖ್ಯೆಯನ್ನು 70ಕ್ಕೆ ಹೆಚ್ಚಿಸಿಕೊಳ್ಳುವುದು. ಜೆಡಿಎಸ್‌ ಸ್ಥಾನ 70 ಮುಟ್ಟಿದರೆ ಆಗ ಮತ್ತೆ ಸಮ್ಮಿಶ್ರ ಸರ್ಕಾರ ಅನಿವಾರ್ಯ. ಕಾಂಗ್ರೆಸ್‌ ಅಥವಾ ಬಿಜೆಪಿ ಪಕ್ಷಗಳು ಸರ್ಕಾರ ರಚಿಸಲು ಜೆಡಿಎಸ್‌ ಆಶ್ರಯವನ್ನು ಪಡೆಯಲೇಬೇಕು ಎಂಬುದು ಜೆಡಿಎಸ್ ಮಾಸ್ಟರ್ ಪ್ಲಾನ್ ಆಗಿದೆ.

Edited By

Manjula M

Reported By

Manjula M

Comments