ಬಿಗ್ ಬ್ರೇಕಿಂಗ್ :  ಕಾಂಗ್ರೆಸ್’ಗೆ ಬಿಗ್ ಶಾಕ್ - ಮಾಜಿ ಸಿಎಂ ಸಿದ್ದು ಪರಮಾಪ್ತ ಬಿಜೆಪಿ ಸೇರ್ಪಡೆ

29 Aug 2018 10:48 AM | Politics
3770 Report

ಲೋಕ ಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಮತ್ತೆ ಆಪರೇಷನ್ ಬಿಜೆಪಿ   ತನ್ನ ಕಾರ್ಯ ಚುರುಕುಗೊಳಿಸಿದೆ. ವಿಧಾನಸಭೆ ಚುನಾವಣೆ ಕಾವು ಮುಗಿಯುತ್ತಿದ್ದಂತೇ ಲೋಕ ಸಭೆ ಚುನಾವಣೆ  ರಂಗೇರುತ್ತಿದೆ.

ಪಕ್ಷ ಬಿಟ್ಟು ಪಕ್ಷಕ್ಕೆ ಸೇರಿಕೊಳ್ಳುವ ನಾಯಕರ  ರಾಜಕೀಯ ದೊಂಬರಾಟ ಆರಂಭವಾಗಿದೆ. ಸದ್ಯ ಕಾಂಗ್ರೆಸ್’ಗೆ ಒಂದು ಬಿಗ್  ಶಾಕ್ ಕಾದಿದೆ. ಕಾಂಗ್ರೆಸ್ನ ನಾಯಕ ಮಾಜಿ ಸಿಎಂ ಸಿದ್ದು ಪರಮಾಪ್ತ, ಮಾಜಿ ಸಚಿವರೂ ಸದ್ಯ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಬ್ರೇಕಿಂಗ್ ಸುದ್ದಿ ಸಿಕ್ಕಿದೆ.ಕಾಂಗ್ರೆಸ್ ನ ಮಾಜಿ ಸಚಿವ ಬಾಬುರಾವ್ ಚಿಂಚರಸೂರ ಅವರು ಸದ್ಯದಲ್ಲೇ ಬಿಜೆಪಿಗೆ ಸೇರಲಿದ್ದಾರೆ  ಎಂಬ ಮಾಹಿತಿ ಹೊರ ಬಿದ್ದಿದೆ.  ಬಿಜೆಪಿ ಪಕ್ಷಕ್ಕೆ ಸೇರುವ ಬಗ್ಗೆ ಸದ್ಯದಲ್ಲೇ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ ಎನ್ನುವ  ಸುದ್ದಿಗಳು ಹರಿದಾಡುತ್ತಿದ್ದು, ಲೋಕಸಭೆ ಚುನಾವಣೆಗೆ  ಬಿಜೆಪಿ  ಸಕಲ ಸಿದ್ಧತೆಗಳನ್ನುಮಾಡಿಕೊಳ್ಳುತ್ತಿದ್ದು,  ಕಾಂಗ್ರೆಸ್ ನಾಯಕರನ್ನು ಸೆಳೆಯಲು ಗಾಳಗಳನ್ನು ಹಾಕುತ್ತಿದ್ದಾರೆ.ಈ ನಡುವೆ ದಿನೇಶ್‌ ಗುಂಡೂರಾವ್‌ ಅವರಿಗೆ ನಾಳೆ ರಾಜೀನಾಮೆ ಪತ್ರ ನೀಡುತ್ತಿದ್ದೇನೆ ಎಂದು ತಿಳಿಸಿರುವ  ಸಿದ್ದು ಪರಮಾಪ್ತ,  ನನ್ನನ್ನು ಬಿಜೆಪಿ, ಜೆಡಿಎಸ್‌ನವರು ಸೋಲಿಸಿಲ್ಲ. ಬದಲಿಗೆ ಕಾಂಗ್ರೆಸ್‌ನವರೇ ಸೋಲಿಸಿದ್ದು ಬಹಳ ದುಃಖವಾಗಿದೆ. ಅದಕ್ಕಾಗಿಯೇ ಬಿಜೆಪಿ ಸೇರುತ್ತಿದ್ದಾನೆ.  ಎರಡೇ ದಿನಗಳಲ್ಲಿ ಬಿಜೆಪಿ ಸೇರುವೆ ಎಂದ ಮಾಜಿ ಸಚಿವ. ಸೂರ್ಯ ಚಂದ್ರ ಹುಟ್ಟಿ ಮುಳುಗುವುದು ಎಷ್ಟು ಸತ್ಯವೋ, ನಾನು ಬಿಜೆಪಿ ಸೇರುವುದು ಅಷ್ಚೇ ಖಚಿತ ಎಂದು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

Edited By

Manjula M

Reported By

Manjula M

Comments