ರೈತರ ಸಾಲ ಮನ್ನಾಗೆ ಸಿಎಂ ಎಚ್’ಡಿಕೆ ಮಾಸ್ಟರ್  ಪ್ಲಾನ್..!!!

29 Aug 2018 9:56 AM | Politics
1887 Report

ಮೈತ್ರಿ ಸರ್ಕಾರ ರಚನೆಯಾದ ಹಿನ್ನಲೆಯಲ್ಲಿ ರೈತರ ಸಾಲ ಮನ್ನಾ ವಿಷಯವಾಗಿ ಸಾಕಷ್ಟು  ಭರವಸೆಗಳನ್ನು ಮೂಡಿಸಿದ್ದರು. ರೈತರನ್ನು ಸಾಲ ಋಣಮುಕ್ತರನ್ನಾಗಿ ಮಾಡಲು ಸಿಎಂ ಹೆಚ್ಡಿಕೆ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತೇನೆ ಎಂದು  ರೈತರ ಪರವಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಬ್ಗಗ್ಗೆ ರಾಜ್ಯದ ನಾನಾ ಜಿಲ್ಲೆಯ ರೈತ ಮುಖಂಡರ ಜೊತೆ ದೀರ್ಘ ಸಭೆ ಕೂಡ ನಡೆಸಿದ್ದರು.

ಸಿಎಂ ಹೆಚ್.ಡಿ.ಕೆ ಅವರು ರಾಜ್ಯದಲ್ಲಿ ಋಣಮುಕ್ತ ಅಧಿನಿಯಮ ಸುಗ್ರೀವಾಜ್ಞೆಯನ್ನು ಜಾರಿಗೆ ತರಲು ಇದೀಗ ಮುಂದಾಗಿದ್ದಾರೆ. ಈ  ವಿಷಯವಾಗಿ ಆ.30  ಅಂದರೆ ನಾಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿನಾಳೆ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳಸಲಿರುವ ಸಿಎಂ ಹೆಚ್ಡಿಕೆ, ರಾಷ್ಟ್ರಪತಿಯನ್ನು ಭೇಟಿ ಮಾಡಿ, ಋಣಮುಕ್ತ ಅಧಿನಿಯಮಕ್ಕೆ ಅಂಕಿತ ಹಾಕುವಂತೆ ಮನವಿ ಮಾಡಲಿದ್ದಾರೆ ಎಂಬುದು ತಿಳಿದು ಬಂದಿದೆ.ಆ ನಂತರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಕೊಡಗಿನ ಅತಿವೃಷ್ಟಿ ಸಂಬಂಧ ಪರಿಹಾರ ನೀಡುವಂತೆ  ಮನವಿ ಮಾಡುತ್ತಾರೆ ಎಂಬ ವಿಚಾರವನ್ನು ಸಿಎಂ  ಕಚೇರಿ ಅಧಿಕೃತ ಮಾಹಿತಿ ಹೊರಡಿಸಿದೆ.

Edited By

Manjula M

Reported By

Manjula M

Comments