ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಫಿಕ್ಸ್..!?

28 Aug 2018 9:36 AM | Politics
7722 Report

ವಿಧಾನ ಸಭಾ  ಚುನಾವಣೆಯು ಮುಗಿದು ಅದರ ಕಾವು ತಣ್ಣಾಗಾಗುತ್ತಿದ್ದಂತೆ  ಲೋಕಸಭಾ ಚುನಾವಣೆಗೆ ಪಕ್ಷಗಳು ಎಲ್ಲಾ ರೀತಿಯಲ್ಲಿಯೂ ಕೂಡ ತಯಾರಿ ನಡೆಸುಕೊಳ್ಳುತ್ತಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಮಾಜಿ ಸಂಸದೆ ರಮ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಂಸದೆ ರಮ್ಯಾ ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದು ಅವರ ತಾಯಿಯಾದ ರಂಜಿತಾ ಹೇಳಿದ್ದಾರೆ. ಮಂಡ್ಯ ನಗರಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದೀಗ ಮೈತ್ರಿ ಸರ್ಕಾರವಿದೆ. ಮಂಡ್ಯದಿಂದ ರಮ್ಯಾ ಸ್ಪರ್ಧಿಸುವುದು ನಿಶ್ಚಿತ ಎಂದು ತಿಳಿಸಿದ್ದಾರೆ.

Edited By

Manjula M

Reported By

Manjula M

Comments