ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ :ಖಾಸಗಿ ಸಾಲ ಮನ್ನಾ ಯಾವುದಕ್ಕೆ, ಯಾರಿಗೆ ಅನ್ವಯ? ಯಾರಿಗೆ ಅನ್ವಯ ಆಗಲ್ಲ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

25 Aug 2018 4:26 PM | Politics
7098 Report

ರಾಜ್ಯ ಸರ್ಕಾರವು ರೈತರಿಗೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಸಿಹಿಸುದ್ದಿಯನ್ನು ನೀಡಿದೆ.

ವರಮಹಾಲಕ್ಷ್ಮಿ ಹಬ್ಬದ ದಿನದಂದು ಸಿ ಎಂ ಎಚ್‌.ಡಿ. ಕೆ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಾಡಿನ ಲಕ್ಷಾಂತರ ಬಡ ಕುಟುಂಬಗಳಿಗೆ ಸರ್ಕಾರ ಶುಭ ಸುದ್ದಿ ನೀಡಿದೆ, ಇದೆಲ್ಲದರ ನಡುವೆ 'ಋಣ ಪರಿಹಾರ ಅಧಿನಿಯಮ 2018' ಸುಗ್ರೀವಾಜ್ಞೆ ಜಾರಿಗೆ ಈಗಾಗಲೇ ನಿರ್ಧಾರ ಮಾಡಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಅಧಿನಿಯಮದಡಿಯಲ್ಲಿ ನೋಂದಣಿಯಾದ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ. 4 ಹೆಕ್ಟೇರ್‌ಗಿಂತ ಹೆಚ್ಚು ಒಣಭೂಮಿ, 3 ಎಕರೆಗಿಂತ ಹೆಚ್ಚು ಮಳೆ ಆಧಾರಿತ ಕೃಷಿ ಭೂಮಿ, ಒಂದು ಎಕರೆಗಿಂತ ಹೆಚ್ಚು ನೀರಾವರಿ ಜಮೀನು ಹೊಂದಿರದ ರೈತರಿಗೆ.ಕೃಷಿ ಮೂಲ ಬಿಟ್ಟು ಬೇರೆ  ಆದಾಯ ಮೂಲ ಹೊಂದಿರಬಾರದು. ವಾರ್ಷಿಕ ಆದಾಯ 1.20 ಲಕ್ಷ ಮೀರದ ಸಣ್ಣ ರೈತ ಅಥವಾ ಭೂಮಿ ಇಲ್ಲದ ಷಿ ಕಾರ್ಮಿಕ. ಖಾಸಗಿ ಲೇವಾದೇವಿಗಾರರು, ಖಾಸಗಿ ಹಣಕಾಸು ಸಂಸ್ಥೆಗಳು, ಗಿರವಿದಾರರಿಗೆ ಈ ಅಧಿನಿಯಮ ಅನ್ವಯ ಒಪ್ಪಂದ, ಬಳಕೆ, ಡಿಕ್ರಿ, ಆದೇಶ ಏನೇ ಇದ್ದರೂ ಸಾಲ ಮನ್ನಾವಾಗುತ್ತದೆ. 

ಯಾವುದಕ್ಕೆ ಮತ್ತು ಯಾರಿಗೆ ಅನ್ವಯ ಆಗಲ್ಲ?

ಭೂಕಂದಾಯದ ಬಾಕಿ., ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ಮತ್ತು ಸ್ಥಳೀಯ ಸಂಸ್ಥೆಗಳ ಬಾಕಿ, ಕೇಂದ್ರ, ರಾಜ್ಯಸರ್ಕಾರಗಳು ಹಾಗೂ ಸ್ಥಳೀಯ ಪ್ರಾಧಿಕಾರಗಳ ತೆರಿಗೆ, ರಾಜಸ್ವ ಬಾಕಿ, ಸರ್ಕಾರಿ  ಕಂಪನಿ, ಎಲ್‌ಐಸಿ, ಸಹಕಾರ ಸಂಘಗಳ ಸಾಲಗಳಿಗೆ ಅನ್ವಯವಿಲ್ಲ,ಕೂಲಿ, ಸಂಭಾವನೆ ವೇತನ ಬಾಕಿ ಇವರಿಗೂ ಕೂಡ ಅನ್ವಯವಾಗುವುದಿಲ್ಲ. 

Edited By

Manjula M

Reported By

Manjula M

Comments