ಬಿಗ್ ಬ್ರೇಕಿಂಗ್ :ಲೋಕಸಭೆ ಚುನಾವಣೆಗೆ ದೇವೆಗೌಡರ ಹೊಸ ದಾಳ..! ಗೌಡರಿಂದ ಕೇಳಿಬಂದಿದೆ ಈ ಅಚ್ಚರಿಯ ಹೆಸರುಗಳು..!?

23 Aug 2018 1:30 PM | Politics
15523 Report

ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆಬಿಗ್ ಶಾಕ್ ಕೊಡಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೊಸದೊಂದು ತಂತ್ರವನ್ನು ರೂಪಿಸಿ  ದಾಳ ಉರುಳಿಸಲು ಸಜ್ಜಾಗಿದ್ದಾರೆ..

ಪ್ರಧಾನಿ ನರೇಂದ್ರ ಮೋದಿಯನ್ನು ಎದುರಿಸಲು ಮಹಿಳಾ ಪ್ರಧಾನಿ ಅಭ್ಯರ್ಥಿಗಳ ಹೆಸರನ್ನು ಜೆಡಿಎಸ್ ವರಿಷ್ಠರು ಹೇಳಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಮಮತಾ ಬ್ಯಾನರ್ಜಿ ಹಾಗೂ ಬಿಎಸ್ಪಿ ನಾಯಕಿ ಮಾಯಾವತಿ ಅವರು ವಿರೋಧ ಪಕ್ಷಗಳ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಲು ಸಮ್ಮತಿಯನ್ನು ಸೂಚಿಸಿದ್ದಾರೆ.ವಿರೋಧ ಪಕ್ಷಗಳಿಂದ ಪ್ರಧಾನಿ ಅಭ್ಯರ್ಥಿಯನ್ನಾಗಿ ನೇಮಿಸಲು ನಮ್ಮ ಸಂಪೂರ್ಣ ಸಹಕಾರವಿದೆ. ಇಂದಿರಾ ಗಾಂಧಿ 17 ವರ್ಷ ಪ್ರಧಾನಿಯಾಗಿರಲಿಲ್ಲವೇ, ಏಕೆ ಕೇವಲ ಪುರುಷರೆ ಪ್ರಧಾನಿಯಾಗಬೇಕು, ಮಮತಾ, ಮಾಯಾವತಿ ಏಕಾಗಬಾರದು ‘ ಎಂದು ಪ್ರಶ್ನೆಯನ್ನು ಕೂಡ ಮಾಡಿದ್ದಾರೆ..

Edited By

Manjula M

Reported By

Manjula M

Comments