ಮಾತೃಪಕ್ಷಕ್ಕೆ ಮರಳಿರುವ ಬಿಎಸ್ವೈ ಅವರ ಆಪ್ತ..!

20 Aug 2018 3:59 PM | Politics
4885 Report

ರಾಜಕೀಯದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವುದು ಸರ್ವೆ ಸಾಮಾನ್ಯದ ಮಾತಾಗಿದೆ. ಅದರಂತೆಯೇ ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕರಾದ  ಬಿ.ಜೆ.ಪುಟ್ಟಸ್ವಾಮಿ ಅವರು  ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದರು.

ಆ ಕಾರಣಕ್ಕಾಗಿ ಅವರು ಜೂನ್‌ನಲ್ಲಿ ರಾಜೀನಾಮೆಯನ್ನು ಕೂಡ ಸಲ್ಲಿಸಿದ್ದರು. ಬಿಎಸ್ ವೈ ಆಪ್ತರಾದ ಬಿ.ಜೆ.ಪುಟ್ಟಸ್ವಾಮಿ ಅವರು ರಾಜೀನಾಮೆ ವಾಪಸ್ ಪಡೆಯುವುದಾಗಿ ಕರ್ನಾಟಕ ಬಿಜೆಪಿ ಅಧ್ಯಕ್ಷರಾದ  ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.. ಬಿಎಸ್ ವೈ ಆಪ್ತರಾದ ಪುಟ್ಟಸ್ವಾಮಿ ಮತ್ತೆ ಮಾತೃಪಕ್ಷಕ್ಕೆ ಬರುತ್ತಾರೋ ಇಲ್ಲವೋ ಎಂಬುದನ್ನು ತಿಳಿಯಬೇಕಾಗಿದೆ.

Edited By

Manjula M

Reported By

Manjula M

Comments