ಹೆಚ್‌ಡಿಕೆ ‘ಸಿಎಂ ಹೆಚ್‌ಡಿಕೆ’ ಆಗಿದ್ದು ಇವರ ಕೃಪೆಯಿಂದಲಂತೆ..!?

18 Aug 2018 12:38 PM | Politics
4636 Report

ನಾನು ದೇವಸ್ಥಾನಗಳಿಗೆ ಹೋಗುತ್ತಿರುವುದರಿಂದ ಸರ್ಕಾರದ ಕಾರ್ಯ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.ನನ್ನ ಆಡಳಿತಕ್ಕೂಕೂಡ ಯಾವುದೇ ಧಕ್ಕೆ ಆಗಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ನನ್ನ ಆಡಳಿತ ಸುಸೂತ್ರವಾಗಿಯೇ ನಡೆಯುತ್ತಿದೆ ಎಂದಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ. ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು ನನಗೆ ದೇವರ ಮೇಲೆ ಅಪಾರ ನಂಬಿಕೆಯಿದೆ. ಯಾವುದೋ ಒಂದು ದೇವರ ಕೃಪೆಯಿಂದ  ನಾನು ಮುಖ್ಯಮಂತ್ರಿ ಆಗಿದ್ದೇನೆ ಎಂದರು. ಆದರೆ ಆ ದೇವರು ಯಾವುದು ಎಂಬುದನ್ನು ತಿಳಿಸಿಲ್ಲ. ಒಟ್ಟಾರೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ.

Edited By

Manjula M

Reported By

Manjula M

Comments

Cancel
Done