ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅನ್ಯಾಯ ಆರೋಪ ಸುಳ್ಳು..! ಸರ್ಕಾರದಿಂದ ಬಂತು ರಿಯಲ್ ರಿಪೋರ್ಟ್

17 Aug 2018 5:59 PM | Politics
5565 Report

ನೂತನ ಮೈತ್ರಿ ಸರ್ಕಾರದಿಮದ ಮೊದಲ ಬಾರಿಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಹೊರಬಂದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಮೊದಲ ಬಜೆಟ್‌ನಲ್ಲಿ 13 ಜಿಲ್ಲೆಗಳನ್ನು ಒಳಗೊಂಡ ಉತ್ತರ ಕರ್ನಾಟಕ ಭಾಗ ಹೆಚ್ಚು ಪಾಲು ಪಡೆದಿದೆ ಎನ್ನಬಹುದು.

ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು  ಜುಲೈ 5ರಂದು ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ಹಂಚಿಕೆ ಮಾಡಿದ ಅನುದಾನವನ್ನು ಜಿಲ್ಲಾವಾರುಗಳಿಗೆ ವಿಂಗಡಿಸಿದಾಗ, ಸಮ್ಮಿಶ್ರ ಸರ್ಕಾರ ಈ ಪ್ರದೇಶವನ್ನು ಗಮನಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪಕ್ಕೆ ತದ್ವಿರುದ್ಧವಾದ ಮಾಹಿತಿಯು ಇದೀಗ ಲಭ್ಯವಾಗಿದೆ.2018 – 19ನೇ ಸಾಲಿನ ಬಜೆಟ್‌ನಲ್ಲಿ ಹಂಚಿಕೆ ಮಾಡಿದ  14,479 ಕೋಟಿ ರೂ ಅನುದಾನದಲ್ಲಿ 7,241 ಕೋಟಿ ರೂ ಉತ್ತರ ಕರ್ನಾಟಕಕ್ಕೆ ಹಂಚಿಕೆಯಾಗಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದಂತಹ  ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಬಿ.ಎಸ್‌. ವೈ ಮತ್ತು ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರುಇದರ ಬಗ್ಗೆ ಟೀಕೆಯನ್ನು ವ್ಯಕ್ತ ಪಡಿಸಿದ್ದರು. ಬಿಜೆಪಿಯ ಬಿ. ಶ್ರೀರಾಮುಲು ಅವರು ‘ಆಗಿರುವ ಅನ್ಯಾಯ ಸರಿ ಮಾಡದಿದ್ದರೆ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಬೆಂಬಲ ನೀಡಬೇಕಾದ ಅನಿವಾರ್ಯತೆಯೂ ಕೂಡ  ಎದುರಾಗಬಹುದು’ ಎಂದೂ ಕೂಡ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಎಲ್ಲರಿಗೂ ಕೂಡ ತಿಳಿದೆ ಇದೆ. ಬಜೆಟ್‌ ಹಂಚಿಕೆಯಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಹೆಚ್ಚು ಪಾಲು ಪಡೆಯುವ ಜೊತೆಗೆ ಕೆಲವು ಯೋಜನೆಗಳ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲಿವೆ ಎಂದು ತಿಳಿಸಿದ್ದಾರೆ. ಉದಾಹರಣೆಗೆ, ರೈತರ ಸಾಲಮನ್ನಾ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಯೊಂದಕ್ಕೆ  1,244 ಕೋಟಿ ರೂ ಸಾಲ ಮನ್ನಾ ಆಗಿದೆ. ಎರಡನೇ ಸ್ಥಾನದಲ್ಲಿ ಬಾಗಲಕೋಟೆ 1,043 ಕೋಟಿ ರೂ ಇದೆ ಎಂದಿದ್ದಾರೆ. ಸರ್ಕಾರದಿಂದ ಇದೀಗ ವರದಿಯನ್ನು ಬಿಡುಗಡೆ ಕೂಡ ಮಾಡಲಾಗಿದೆ.

Edited By

Manjula M

Reported By

Manjula M

Comments