ಮೈತ್ರಿ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಮತ್ತೊಂದು ಬಿಗ್ ಶಾಕ್

16 Aug 2018 5:59 PM | Politics
617 Report

ಕರ್ನಾಟಕ ರಾಜ್ಯದ ಸಮ್ಮಿಶ್ರ ಸರ್ಕಾರವು ಉತ್ತರ ಕರ್ನಾಟಕ ಭಾಗಕ್ಕೆ ಮತ್ತೊಂದು ಬಿಗ್ ಶಾಕ್ ನೀಡಿದೆ. ಆಯುಷ್ ಔಷಧ ತಯಾರಿಕಾ ಘಟಕವನ್ನು ಬೆಳಗಾವಿಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಬೇಕಂಬ ಆದೇಶವನ್ನು ಹೊರಡಿಸಿದೆ.

ಆಯುಷ್ ಔಷಧ ತಯಾರಿಕಾ ಘಟಕ ಸ್ಥಳಾಂತರ ಮಾಡಿರುವ ಸರ್ಕಾರದ  ಈ ಕ್ರಮ ತೀವ್ರ ಆಕ್ರೋಶಕ್ಕೆ ಇದೀಗ ಕಾರಣವಾಗಿದೆ. ಹಿಂದೆ ಇದ್ದಂತಹ ಸಿಎಂ ಸಿದ್ದರಾಮಯ್ಯ ಸರ್ಕಾರ 2017 ರಲ್ಲಿ ಆಯುಷ್ ಔಷಧ ತಯಾರಿಕಾ ಘಟಕವನ್ನು ಬೆಳಗಾವಿಯಲ್ಲಿ ಮಾಡುವುದಾಗಿ ಘೋಷಣೆಯನ್ನು ಮಾಡಿದ್ದರು. ನೂತನ ಘಟಕಕ್ಕೆ 25 ಕೋಟಿ ರೂ. ಅನುದಾನ ಮೀಸಲಿಟ್ಟು ತಯಾರಿಕಾ ಘಟಕ ಸ್ಥಾಪನೆಗೆ ಹಸಿರು ನಿಶಾನೆ ಕೂಡ ಸಿಕ್ಕಿತ್ತು. ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೋದಲ್ಲಿ ಘಟಕ ಸ್ಥಾಪನೆಗೆ ಸ್ಥಳವನ್ನು ಗುರುತಿಸಲಾಗಿತ್ತು. ಆದರೆ ಇದೀಗ ಸಚಿವ ಸಂಪುಟದಲ್ಲಿ ಯಾವುದೇ ಅನುಮೋದನೆಯನ್ನು ಪಡೆದಿಲ್ಲ. ಹಾಗೂ ಬೆಂಗಳೂರಿನ ಜಯನಗರದಲ್ಲಿರುವ ಸರ್ಕಾರಿ ಕೇಂದ್ರಿಯ ಔಷಧಿ ಬಲವರ್ಧನೆ ಕಾರಣ ಹೇಳಿ ಘಟಕ ಶೀಪ್ಟ್ ಮಾಡುವಂತೆ ಆದೇಶವನ್ನು ಹೊರಡಿಸಿದೆ ಎಂದು ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments