ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಭರ್ಜರಿ ಕೊಡುಗೆ..!

14 Aug 2018 10:19 AM | Politics
4872 Report

ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಸೋಮವಾರ ಮಾಧ್ಯಮದವರ ಜೊತೆ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರುಇದಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳೂ ಒಪ್ಪಿಗೆಯನ್ನು ನೀಡಿವೆ, 2 ಲಕ್ಷ ರುಪಾಯಿವರೆಗಿನ ಸಾಲ ನಾಲ್ಕು ಹಂತಗಳಲ್ಲಿ ಸಾಲ ಮನ್ನಾ ಆಗಲಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಸರ್ಕಾರ 37000 ಕೋಟಿ  ರೂಗಳನ್ನು ಭರಿಸಬೇಕಾಗುತ್ತದೆ.

ಶೇ.32.7ರಷ್ಟುಆದಾಯ ಹೆಚ್ಚಳ: 2018 ಜುಲೈ ವರೆಗೆ .31,303 ಕೋಟಿ ಆದಾಯವನ್ನು ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಇದು .1332 ಕೋಟಿಯಷ್ಟುಹೆಚ್ಚು. ಅಂದರೆ ಕಳೆದ ಆರ್ಥಿಕ ಸಾಲಿಗೆ ಹೋಲಿಸಿದರೆ ಈಗ ಶೇ.32.7ರಷ್ಟುಆದಾಯ ಹೆಚ್ಚಳವಾಗಿದೆ. ಮೋಟಾರ್‌ ವಾಹನ ತೆರಿಗೆಯಿಂದ ಶೇ.4.3ರಷ್ಟು, ನೋಂದಣಿ, ಮುಂದ್ರಾಂಕದಿಂದ ಶೇ.18, ವಾಣಿಜ್ಯ ತೆರಿಗೆಯಿಂದ ಶೇ.0.09 ರಷ್ಟುಹೆಚ್ಚಿಗೆ ತೆರಿಗೆಯನ್ನು ಸಂಗ್ರಹಿಸಲಾಗಿದೆ. ಇದರಿಂದಾಗಿ ಸಾಲ ಮನ್ನಾ ಮಾಡಲು  ಸರ್ಕಾರಕ್ಕೆ ಯಾವುದೇ ರೀತಿ ಹೊರೆಯಾಗಿ ಕಾಣುತ್ತಿಲ್ಲ ಎಂದು ತಮ್ಮ ನಿರ್ಧಾರವನ್ನು ಕುಮಾರಸ್ವಾಮಿ ಸಮರ್ಥಿಸಿಕೊಂಡರು. ಜಮೀನು ಕೆಲಸ ಮಾಡಿ ನಾನು ಇಪ್ಪತ್ತರಿಂದ ಮೂವತ್ತು ಕಳೆದು ಹೋಗಿವೆ. ಈಗ ಭತ್ತ ನಾಟಿ  ಮಾಡುವುದು ಎಷ್ಟುಕಷ್ಟಎಂಬುದು ನನಗೆಅರಿವಾಗಿದೆ. ಸಮಿಶ್ರ ಸರ್ಕಾರದ ಆದ್ಯತೆ ಮುಂದೇನಿದ್ದರೂ  ರೈತರ ಏಳಿಗೆಯತ್ತ ಎಂದು  ಸಿಎಂ ಕುಮಾರಸ್ವಾಮಿ ಅವರು ತಿಳಿಸಿದರು.

Edited By

Manjula M

Reported By

Manjula M

Comments