ಲೋಕಸಭಾ ಚುನಾವಣಾ ಸ್ಪರ್ಧೆಗಿಳಿಯಲು ಸಿದ್ದವಾದ್ರೂ ಪ್ರಜ್ವಲ್ ರೇವಣ್ಣ..! ಯಾವ ಕ್ಷೇತ್ರದಿಂದ ಗೊತ್ತಾ..?

13 Aug 2018 10:24 AM | Politics
426 Report

ವಿಧಾನ ಸಭಾ ಚುನಾವಣೆಯ ಕಾವು ಹೇಗೆ ದಿನದಿಂದ ದಿನಕ್ಕೆ ಹೇಗೆ ರಂಗೇರಿತ್ತೋ ಅದೇ ರೀತಿ ಮುಂಬರುವ  ಲೋಕಸಭಾ ಚುನಾವಣೆಯು ಕೂಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪ್ರಜ್ವಲ್ ರೇವಣ್ಣ ಯಾವ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಾರೆ ಎಂಬ ಗೊಂದಲ ಸಾಕಷ್ಟಿತ್ತು. ಇದೀಗ ಆ ಗೊಂದಲಕ್ಕೆ ತೆರೆ ಬಿದ್ದಿದೆ.

ಪ್ರಜ್ವಲ್ ರೇವಣ್ಣ ಅವರನ್ನು ಹಾಸನ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗುವುದು ಎಂದು ಮಾಜಿ ಪ್ರಧಾನಿಯಾದ ಎಚ್.ಡಿ ದೇವೇಗೌಡರು ತಿಳಿಸಿದ್ದಾರೆ. ಈ ಮೂಲಕ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆಯನ್ನು ದೇವೇಗೌಡ ಅವರು ಖಚಿತಪಡಿಸಿದ್ದಾರೆ.

Edited By

Manjula M

Reported By

Manjula M

Comments