ಕುಮಾರಸ್ವಾಮಿ ದಾಳಕ್ಕೆ ಅಲ್ಲೊಲ್ಲ ಕಲ್ಲೊಲವಾದ 'ಕೈ'.. 'ಕಮಲ'..!

12 Aug 2018 2:19 PM | Politics
18900 Report

ಸಿಎಂ ಕುಮಾರಸ್ವಾಮಿ ಅವರು ರೈತರ ಮೊದಲ ಹೆಜ್ಜೆಯಾಗಿ ಶನಿವಾರ ಮಂಡ್ಯದಲ್ಲಿ ನಡೆದ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ನಡೆದ ನಾಟಿ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಗದ್ದೆಗೆ ಇಳಿದರು. ಭತ್ತದ ಪೈರನ್ನು ನಾಟಿ ಮಾಡಿ ಅನ್ನದಾತರಿಗೆ ಶುಭವನ್ನು ಕೋರಿದರು.. ನಾಟಿ ಕಾರ್ಯಕ್ರಮದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ರೈತರ ಪರವಾಗಿ ಕೆಲವೊಂದು ಮಾತುಗಳನ್ನು ಹೇಳಿದ್ದಾರೆ.

'ನಾನು ಅಧಿಕಾರದಲ್ಲಿ ಇರುವಷ್ಟೂ ದಿನವೂ ಕೂಡ ರೈತರಿಗಾಗಿಯೇ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಯಾರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ರಾಷ್ಟ್ರೀಯ ಬ್ಯಾಂಕ್ ಸಾಲ ಮನ್ನಾ ಮಾಡುವ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆಯನ್ನು ಕೊಡುತ್ತೇವೆ...ನಿಮಗೆ ಏನೇ ಸಮಸ್ಯೆ ಇದ್ದರೂ ನೇರವಾಗಿ ನನ್ನ ಬಳಿ ಬನ್ನಿ, ಹೇಳಿಕೊಳ್ಳಿ' ಎಂದು ಕರೆಯನ್ನು ನೀಡಿದರು.

ಇದೆಲ್ಲಾ ಒಂದು ಕಡೆ ನಡೆಯುವುದಾದರೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಬಿರುಗಾಳಿಯೆ ಎಬ್ಬಿದಂತಾಗಿದೆ. ಸಾಲಮನ್ನಾ ಮಾಡಿರುವ ನಿರ್ಧಾರ ಜೆಡಿಎಸ್ ಪಕ್ಷದ್ದು ಎಂದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಸಮ್ಮಿಶ್ರ ಸರ್ಕಾರದಲ್ಲಿ ಭಾಗ ಆಗಿರೋದ್ರಿಂದ ಕಾಂಗ್ರೆಸ್ ಕೂಡ ಸಾಲಮನ್ನಾ ಕ್ರೆಡಿಟ್ ಪಡೆದುಕೊಳ್ಳಲು ಪ್ರಯತ್ನ ಪಡ್ತಿದೆ. ಆದರೆ ಸಿಎಂ ಕುಮಾರಸ್ವಾಮಿ ಮಾತ್ರ ಮಂಡ್ಯದಿಂದ ರೈತಯಾತ್ರೆ ಪ್ರಾರಂಭ ಮಾಡಿದ್ದಾರೆ, ಎಲ್ಲಾ ಜಿಲ್ಲೆಗಳಿಗೂ ಕೂಡ ಪ್ರವಾಸ ಮಾಡ್ತೇನೆ. ರೈತರನ್ನು ಭೇಟಿಯಾಗಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡ್ತೇನೆ ಎಂದು ಘೋಷಣೆ ಮಾಡಿದ್ದಾರೆ, ಜನಾಭಿಪ್ರಾಯ ಜೆಡಿಎಸ್ ಪರವಾಗಿ ಬಿಡುತ್ತೆ ಅನ್ನೋದು ಕಾಂಗ್ರೆಸ್ ಕಂಗಾಲಾಗಲು ಕಾರಣವಾಗಿದೆ. ಜೊತೆಗೆ ಕಮಲ ಪಾಳಯ ಕೂಡ ಮುಖ್ಯಮಂತ್ರಿ ಕೆಲಸದಿಂದ ಚಕಿತವಾಗಿದೆ.ಇದೇ ರೀತಿ‌ ರಾಜ್ಯಾದ್ಯಂತ ಮುಖ್ಯಮಂತ್ರಿ ಪ್ರವಾಸ ಮಾಡಿದ್ರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ‌ ದುಪ್ಪಟ್ಟು ಆಗೋದ್ರಲ್ಲಿ ಯಾವುದೇ ‌ಅನುಮಾನವಿಲ್ಲ ಅನ್ನೋದು ಬಿಜೆಪಿ ನಾಯಕರ ಮಾತಾಗಿದೆ ಎಂದು ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments