ರಾಜ್ಯ ಸರ್ಕಾರದಿಂದ ಜನತೆಗೆ ಸಿಕ್ತಿದೆ ಬಂಪರ್ ಆಫರ್..!

10 Aug 2018 11:18 AM | Politics
295 Report

ರಾಜ್ಯದ ಜನತೆಗೆ ಕುಮಾರಸ್ವಾಮಿ ಸರ್ಕಾರವು ಸ್ವಾತಂತ್ರ್ಯೋತ್ಸವ ದಿನ ಅಥವಾ ಗಣೇಶ ಚತುರ್ಥಿಗೆ ಮತ್ತೊಂದು  ಸಿಹಿ ಸುದ್ದಿ ನೀಡಲು ಮುಂದಾಗಿದೆ. ಎಲ್ಲರೂ ಕೂಡ ಕಾತುರದಿಂದ ಕಾಯಿರಿ ಎಂದು ಸಿಎಂ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ..

ಎಲ್ಲರೂ ಕೂಡ ಸಾಲ ಮನ್ನಾ ಮಾಡಬಹುದೆಂದು ಯೋಚನೆ ಮಾಡುತ್ತಿರುತ್ತಾರೆ. ಆದರೆ ಸಾಲ ಮನ್ನಾ ಅಷ್ಟೇ ಅಲ್ಲದೆ ರೈತರು ಹಾಗೂ ಜನ ಸಾಮಾನ್ಯರನ್ನು ಖುಷಿಪಡಿಸುವ ನಿಟ್ಟಿನಲ್ಲಿ ಮತ್ತೊಂದು ಉಡುಗೊರೆ ನೀಡಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ. ಒಂದು ವೇಳೆ ಸಾಧ್ಯವಾದರೆ ಇದೇ ಸ್ವಾತಂತ್ರ್ಯ ದಿನಾಚರಣೆಗೆ ಘೋಷಣೆ ಮಾಡಲಾಗುವುದು . ಅಥವಾ ಗಣೇಶ ಹಬ್ಬಕ್ಕೆ ಉಡುಗೊರೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ವೇಳೆ ಯಾವ ವಿಚಾರಕ್ಕೆ ಹಾಗೂ ಫಲಾನುಭವಿಗಳು ಯಾರು ಎಂಬ ಬಗ್ಗೆ ವಿವರಣೆ ನೀಡಲು ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಮಾಹಿತಿ ನೀಡಿಲ್ಲ..

Edited By

Manjula M

Reported By

Manjula M

Comments