ನಿಮ್ಮ ಬಳಿ ಬಿಪಿಎಲ್ ಮತ್ತು ಎಪಿಎಲ್‌ ಕಾರ್ಡ್ ಇದೆಯಾ..? ಹಾಗಾದ್ರೆ ಸಿಕ್ತು ಅನ್ಕೊಳ್ಳಿ ಬಂಪರ್ ಆಫರ್..!

02 Aug 2018 4:55 PM | Politics
6341 Report

ಸರ್ಕಾರವು ನಾನಾ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ನಿಟ್ಟಿನಲ್ಲಿ ನೋಡುವುದಾದರೆ..  ಆರೋಗ್ಯ ಕರ್ನಾಟಕ ಯೋಜನೆಯೂ ಕೂಡ ಒಂದು..

ಇಲ್ಲಿಯವರೆಗೂ ಕೂಡ ಆರೋಗ್ಯ ಕರ್ನಾಟಕ ಯೋಜನೆ  ಜಾರಿಯಾಗದ ಹಿನ್ನೆಲೆಯಲ್ಲಿ ಬಿಪಿಎಲ್ ಮತ್ತು ಎಪಿಎಲ್‌ ಪಡಿತರ ಚೀಟಿ ಇರುವವರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ ಎಂದು ಆರೋಗ್ಯ ಸಚಿವರಾದ ಶಿವಾನಂದ ಪಾಟೀಲ್‌ ತಿಳಿಸಿದ್ದಾರೆ. 2019ರ ವೇಳೆಗೆ ಕರ್ನಾಟಕ ಯೋಜನೆಯ ಆರೋಗ್ಯ ಕಾರ್ಡ್‌ಗಳು ಸಂಪೂರ್ಣವಾಗಿ ಎಲ್ಲರಿಗೂ ದೊರೆಯಲಿದೆ, ಉಚಿತ ಚಿಕಿತ್ಸೆಗೆ ಆರೋಗ್ಯ ಕನಾಟಕ ಕಾರ್ಡ್‌ ಕಡ್ಡಾಯವೇನಲ್ಲ ಅದೇ ರೀತಿ ಆರೋಗ್ಯ ಕಾರ್ಡ್‌ ಇಲ್ಲದೆ 13,591 ಮಂದಿ ಈಗಾಗಲೇ ಚಿಕಿತ್ಸೆ ಪಡೆದಿದ್ದಾರೆ, ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆಯಾಗುವುದು ಸ್ವಲ್ಪ ನಿಧಾನವಾಗಲಿದೆ. ಈ ಕಾರಣಕ್ಕೆ ಈ ಹಿಂದಿನಂತೆಯೇ ಬಿಪಿಎಲ್‌ ಹಾಗೂ ಎಪಿಎಲ್‌ ಪಡಿತರದಾರರಿಗೆ ಚಿಕಿತ್ಸೆ ದೊರೆಯಲಿದೆ ಆರೋಗ್ಯ ಸಚಿವರಾದ ಶಿವಾನಂದ ಪಾಟೀಲ್‌ ತಿಳಿಸಿದ್ದಾರೆ.

Edited By

Manjula M

Reported By

Manjula M

Comments