ರೈಲ್ವೆ ಸ್ಟೇಶನ್‌ಗೆ 20 ನಿಮಿಷ ಇಳಿಯುವ ಮುನ್ನವೇ ಪ್ರಯಾಣಿಕರ ಮೊಬೈಲ್‌ ಗೆ ಬರಲಿದೆ ಈ SMS alert..!!

30 Jul 2018 1:25 PM | Politics
417 Report

ರೈಲು ಪ್ರಯಾಣಿಕರು ರಾತ್ರಿ 11ರಿಂದ ಬೆಳಗ್ಗೆ 7 ಗಂಟೆಯ ವರೆಗಿನ ಅವಧಿಯಲ್ಲಿ ತಾವು ಇಳಿದುಕೊಳ್ಳುವ ತಾಣಕ್ಕೆ 20 ನಿಮಿಷ ಇರುವಾಗಲೇ SMS alert ಪಡೆಯಲಿದ್ದಾರೆ.ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಈ SMS alert ಸೌಕರ್ಯವನ್ನು ಆರಂಭಿಸಲಿದೆ ಎಂದು ಸಹಾಯಕ ರೈಲ್ವೆ ಸಚಿವ ರಾಜನ್‌ ಗೊಹೇನ್‌ ಅವರಿಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಲಿಖೀತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.

ಗಮ್ಯ ತಾಣ SMS alert ಸೌಕರ್ಯವು 139 ಮೂಲಕ ಸಿಗಲಿದೆ, ಮೀಸಲು ಪ್ರಯಾಣಿಕರು 139 ರೈಲ್ವೆ Enquiry ಸರ್ವಿಸ್‌ ಇಂಟರಾಕ್ಟೀವ್‌ ವಾಯ್‌ಸ್‌ ರೆಸ್ಪಾನ್ಸ್‌ (ಐವಿಆರ್‌), ಕಸ್ಟಮರ್‌ ಸರ್ವಿಸ್‌ ಎಕ್ಸಿಕ್ಯುಟಿವ್‌ ನೆರವಿನ 139 ರೈಲ್ವೆ Enquiry ಸರ್ವಿಸ್‌ ಮತ್ತು ಎಸ್‌ಎಂಎಸ್‌ 139 ಮೂಲಕ, ಕೇವಲ ಒಂದು ಸರಳ ಕೀವರ್ಡ್‌ ಬಳಸಿಕೊಂಡು ಡೆಸ್ಟಿನೇಶನ್‌ ಅಲರ್ಟ್‌ ಸೆಟ್‌ ಮಾಡಿಕೊಳ್ಳಬಹುದಾಗಿದೆ ಎಂದು ಸಚಿವರು ಪ್ರಕಟನೆಯೊಂದರಲ್ಲಿ ಹೇಳಿದ್ದಾರೆ. ಗಮ್ಯ ತಾಣ ಹೆಸರನ್ನು ತಮ್ಮ ಮೊಬೈಲ್‌ ನಂಬರ್‌ನಲ್ಲಿ ಅಲರ್ಟ್‌ ಕಾಲ್‌ ಸೆಟ್‌ ಮಾಡುವ ಮೂಲಕ ಪ್ರಯಾಣಿಕರು ತಮ್ಮ ಮೊಬೈಲ್‌ ನಂಬರ್‌ಗೆ ಡೆಸ್ಟಿನೇಶನ್‌ ಅಲರ್ಟ್‌ ದೃಢೀಕರಣ ಮೆಸೇಜ್‌ ಪಡೆಯುತ್ತಾರೆ. ಭಾರತೀಯ ರೈಲ್ವೆ ಈಚೆಗೆ ವೃದ್ಧ ಮತ್ತು ವಿಕಲಾಂಗ ಪ್ರಯಾಣಿಕರಿಗಾಗಿ ಸಾರಥಿ ಸೇವೆಯಂತಹ ಕೆಲವು ಪ್ರಯಾಣಿಕ ಸ್ನೇಹಿ ಸೌಕರ್ಯಗಳನ್ನು ಆರಂಭಿಸಿದೆ. ಇದರಿಂದಾಗಿ ಈ ವರ್ಗದ ಪ್ರಯಾಣಿಕರು ಪಾವತಿ ನೆಲೆಯಲ್ಲಿ ಬ್ಯಾಟರಿ ಚಾಲಿತ ಕಾರು ಸೇವೆಯನ್ನು ಬುಕ್‌ ಮಾಡಬಹುದಾಗಿದೆ; ಪೋರ್ಟರ್‌ ಸೇವೆಯನ್ನು ಪಡೆಯಬಹುದಾಗಿದೆ. ಈಗಾಗಲೇ ಈ ವರ್ಗದ ಪ್ರಯಾಣಿಕರಿಗೆ ಪಿಕಪ್‌ ಮತ್ತು ಡ್ರಾಪ್‌ ಹಾಗೂ ವೀಲ್‌ಚೇರ್‌ ಸೇವೆಗಳು ಉಪಲಬ್ಧವಿವೆ.

Edited By

Shruthi G

Reported By

Shruthi G

Comments