ಕರ್ನಾಟಕದಲ್ಲಿರುವ ಪ್ರತಿಯೊಬ್ಬರ ಮೇಲೂ 45 ಸಾವಿರ ಸಾಲದ ಹೊರೆ ಇದೆಯಂತೆ..!!?

23 Jul 2018 3:17 PM | Politics
498 Report

ರಾಜ್ಯದಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮತ್ತು ಈಗಿನ ಸಮ್ಮಿಶ್ರ ಸರ್ಕಾರಗಳು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವುದಕ್ಕಾಗಿ ಮುಂದಾಗಿರುವುದರ ಪರಿಣಾಮ ರಾಜ್ಯದ ಜನತೆಯ ಮೇಲೆ ಹೊರೆ ಬಿದ್ದಂತಾಗಿದೆ. ಜನರ ತೆರಿಗೆ ಮತ್ತು ಇತರೆ ಮೂಲಗಳಿಂದ ಸಾಲವನ್ನು ಮಾಡಿ ಸರ್ಕಾರಗಳು ಯೋಜನೆ ಜಾರಿಗೆ ಮುಂದಾಗಿದ್ದು ಇದರಿಂದ ರಾಜ್ಯದ ಆರ್ಥಿಕ ಪರಸ್ಥಿತಿ ಹಳ್ಳಹಿಡಿಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪ ಮಾಡಿದ್ದಾರೆ.

ಹಿಂದಿನ ಸಿದ್ದರಾಮಯ್ಯ ಸರ್ಕಾರ ಮತ್ತು ಈಗಿನ ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ 40,000 ಕೋಟಿಯ ಅನಪೇಕ್ಷಿತ ಸಾಲ ಮಾಡುವ ಮೂಲಕ ರಾಜ್ಯದ ಜನತೆಯ ಮೇಲೆ ಹೊರೆ ಹಾಕಿದೆ. ಸಿದ್ದರಾಮಯ್ಯನವರು ಕಳೆದ ಐದು ವರ್ಷಗಳಲ್ಲಿ 2 ಲಕ್ಷದ 86 ಸಾವಿರದ 479 ಕೋಟಿ ಸಾಲವನ್ನು ಪಡೆದುಕೊಂಡಿದ್ದರು. ಈಗಿನ ಸಮ್ಮಿಶ್ರ ಸರ್ಕಾರದಲ್ಲಿ ಈ ಸಾಲದ ಹೊರೆ 2 ಲಕ್ಷದ 92 ಸಾವಿರ ಕೋಟಿ ಗೆ ಏರಿಕೆಯಾಗಿದೆ. ಇದೇ ಸ್ಥಿತಿ ರಾಜ್ಯದಲ್ಲಿ ಮುಂದುವರೆದರೆ ರಾಜ್ಯದ ಆರ್ಥಿಕ ಸ್ಥಿತಿ ಕೆಡಲಿದ್ದು, ಸಹಕಾರಿ ಸಂಘಗಳು ದಿವಾಳಿಯಾಗಲಿವೆ ಎಂದು ಆರೋಪ ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್ವೈ ಅವರ ಮಾತಿನಂತೆ ಲೆಕ್ಕಾ ಮಾಡುವುದಾದರೆ ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮೇಲು ಸರಾರಿ ಅಂದಾಜು 45 ಸಾವಿರ ಹೊರೆ ಬೀಳಲಿದೆ ಎಂದು ಆರ್ಥಿಕ ತಜ್ಙರ ಅಭಿಪ್ರಾಯವಾಗಿದೆ. ಈಗಾಗಲೇ ಹೆಚ್ಚಾಗುತ್ತಿರುವ ಸಾಲದ ಮೊತ್ತವನ್ನು ಸರಿದೂಗಿಸುವುದಕ್ಕೆ ರಾಜ್ಯ ಸರ್ಕಾರ ಅನೇಕ ಇಲಾಖೆಗಳಿಗೆ ನೀಡುತ್ತಿದ್ದ ಅನುದಾನಕ್ಕೆ ಕತ್ತರಿ ಬಿದ್ದಿದೆ. ಇದರ ಪರಿಣಾಮದಿಂದಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಶಿವಮೊಗ್ಗದಲ್ಲಿ ಬಿಎಸ್ವೈ ಹೇಳಿದ್ದಾರೆ. ಅನೇಕ ಸಹಕಾರಿ ಬ್ಯಾಂಕುಗಳು ಸರ್ಕಾರದ ಅಧೀನದಲ್ಲಿ ಇದ್ದರೂ ಕೂಡ ಸಮ್ಮಿಶ್ರ ಸರ್ಕಾರ ರೈತರ ಸಾಲವನ್ನು ನಾಲ್ಕು ಹಂತದಲ್ಲಿ ತೀರಿಸುವ ಭರವಸೆಯನ್ನು ನೀಡಿದೆ, ಇದಕ್ಕಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಸಹಕಾರವನ್ನು ಕೂಡ ಪಡೆದುಕೊಂಡಿದೆ. ಇದಕ್ಕೆ ರಿಸರ್ವ ಬ್ಯಾಂಕ್ ಹೇಗೆ ಒಪ್ಪಿಗೆ ನೀಡುತ್ತದೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ರೈತರ ಸಾಲಮನ್ನಾ ವಿಷಯವಾಗಿ ಮುಖ್ಯಮಂತ್ರಿ ಎರಡು ಬಾರಿ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದಾರೆ ಆದರೆ ಆ ಎರಡೂ ಸಭೆಗೆ ಆರ್ ಬಿ ಐ ನ ಅಧಿಕಾರಿಗಳು ಭಾಗವಹಿಸಿಲ್ಲ. ಸರ್ಕಾರ ನಿಯಮ ಭಾಹೀರವಾಗಿ ನಿರ್ಧಾರ ಕೈಗೊಂಡಿದೆಯೇ ಎಂದು ಬಿಎಸ್ವೈ ಹೇಳಿದ್ದಾರೆ.

Edited By

Manjula M

Reported By

Manjula M

Comments