ಬಿಪಿಎಲ್‌ ಕಾರ್ಡ್‌ದಾರರಿಗೆ ಬಜೆಟ್ ನಲ್ಲಿ ಸಿಕ್ಕಿದ್ದೇನು? ಇಲ್ಲಿದೆ ನೋಡಿ ಮುಖ್ಯ ಅಂಶಗಳು...

05 Jul 2018 2:45 PM | Politics
19372 Report

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಇಂದು ಮಂಡನೆ ಮಾಡಿದರು. ಕೃಷಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಹಲವು ಕೊಡುಗೆಗಳನ್ನು ನೀಡಿದ್ದಾರೆ.

 • ಇಂದಿರಾ ಕ್ಯಾಂಟೀನ್‌ಗಳ ಜನಪ್ರಿಯತೆಯ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ 247 ಇಂದಿರಾ ಕ್ಯಾಂಟೀನ್‌ಗಳ ಆರಂಭಕ್ಕೆ ನಿರ್ಧಾರ ಕೈಗೊಂಡಿದ್ದಾರೆ.
 • ಬಿಪಿಎಲ್‌ ಕಾರ್ಡ್‌ದಾರ ಕುಟುಂಬಗಳ ಗರ್ಭಿಣಿಯರಿಗೆ 6ನೇ ತಿಂಗಳಿನಿಂದ 12ನೇ ತಿಂಗಳ ವರೆಗೂ (ಹೆರಿಗೆಯ ಬಳಿಕ 3 ತಿಂಗಳ ವರೆಗೆ) ಪ್ರತಿ ತಿಂಗಳೂ ತಲಾ 1,000 ರೂ.ಗಳ ಸಹಾಯಧನ ನೀಡಲಾಗುವುದು.
 • ಅನ್ನಭಾಗ್ಯ ಅಕ್ಕಿ ಪ್ರಮಾಣ 7 ಕೆ.ಜಿಯಿಂದ 5 ಕೆ.ಜಿಗೆ ಇಳಿಕೆ. ಬಿಪಿಎಲ್‌ ಪಡಿತರ ಚೀಟಿಗೆ 1 ಕೆಜಿ ಪಾಮ್‌ ಎಣ್ಣೆ, 1 ಕೆ.ಜಿ ಸಕ್ಕರೆ, 1 ಕೆಜಿ ಉಪ್ಪು, ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ ತೊಗರಿ ಬೇಳೆ ವಿತರಣೆ.
 • ಹೊಸ ಮೋಟಾರ್ ವಾಹನಗಳ ತೆರಿಗೆಯನ್ನು ಶೇಕಡಾ 5೦ ರಷ್ಟು ಹೆಚ್ಚಳ.
 • 65 ವರ್ಷ ಮೀರಿದ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ಮಾಸಿಕ 600 ರೂ.ಗಳಿಂದ 1,000 ರೂ.ಗಳಿಗೆ ಏರಿಕೆ.
 • ಸಮಾಜ ಕಲ್ಯಾಣ ಇಲಾಖೆಗೆ 11,758 ಕೋಟಿ ರೂ ಅನುದಾನ
 • ಶಿಕ್ಷಣ ಕ್ಷೇತ್ರಕ್ಕೆ ಶೇ 11ರಂತೆ 26,581 ಕೋಟಿ ರೂ ಅನುದಾನ.
 • ಮಠ ಮಾನ್ಯಗಳಿಗೆ 25 ಕೋಟಿ ರೂ ಅನುದಾನ
 • ಸ್ವ ಉದ್ಯೋಗ ಪ್ರೋತ್ಸಾಹಕ್ಕೆ ‘ಕಾಯಕ’ ಯೋಜನೆ
 • ಸಾಲ ಮರುಪಾವತಿ ಮಾಡಿದ ರೈತರಿಗೆ ಗರಿಷ್ಠ 25,000 ರೂ ವರೆಗೆ ಉತ್ತೇಜನ.
 • ತೆಂಗು ಬೆಳೆಗಾರರ ಹಿತರಕ್ಷಣೆಗೆ 190 ಕೋಟಿ ರೂ ಮೀಸಲು
 • ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭ
 • ಪ್ರಾಥಮಿಕ ಮತ್ತು ಪ್ರೌಢಶಾಲಾ ಕಟ್ಟಡಗಳ ದುರಸ್ತಿಗೆ 150 ಕೋಟಿ ರೂ ವಿಶೇಷ ಪ್ಯಾಕೇಜ್‌
 • ಮದ್ಯದ ಮೇಲಿನ ತೆರಿಗೆ ಶೇ 4ರಷ್ಟು ಹೆಚ್ಚಳ.
 • ಸಂಧ್ಯಾ ಸುರಕ್ಷಾ ಯೋಜನೆಗೆ ಅನುದಾನ 600 ಕೋಟಿ ರೂಗಳಿಂದ 1000 ಕೋಟಿ ರೂ.ಗಳಿಗೆ ಏರಿಕೆ
 • ವಿದ್ಯುತ್‌ ದರ ಯೂನಿಟ್‌ಗೆ 20 ಪೈಸೆ ಹೆಚ್ಚಳ
 • ರಾಜ್ಯದಲ್ಲಿ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ14 ರೂ, ಡೀಸೆಲ್‌ ಬೆಲೆ 1.12 ರೂ ಹೆಚ್ಚಳ
 • ಪ್ರತಿ ರೈತರ ಕುಟುಂಬದ 2 ಲಕ್ಷ ರೂ ವರೆಗಿನ ಸಾಲ ಮನ್ನಾ

Edited By

Shruthi G

Reported By

Shruthi G

Comments