ಬಜೆಟ್ ನ ಮುಖ್ಯ HIGHLIGHTS..! ಯಾರಿಗೆ ಸಿಹಿ, ಯಾರಿಗೆ ಕಹಿ..!?ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್..

05 Jul 2018 2:11 PM | Politics
1689 Report

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಇಂದು ಮಂಡನೆ ಮಾಡಿದರು. ಕೃಷಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿ ಮೀಸಲಾಗಿಡಲಾಗಿದೆ.

ಮೈತ್ರಿ ಸರ್ಕಾರದ ಬಜೆಟ್ ನ ಕಂಪ್ಲೀಟ್ ಡೀಟೇಲ್ಸ್..

ಕೃಷಿ

  • 2018-19ನೇ ಸಾಲಿನ ಹೊಸ ಯೋಜನೆ  ಕೃಷಿ
  • ಕೋಲಾರ, ಚಿತ್ರದುರ್ಗ, ಕೊಪ್ಪಳ, ಗದಗ ಜಿಲ್ಲೆಯಲ್ಲಿ ಇಸ್ರೇಲ್ ಮಾದರಿ ಕೃಷಿ
  • ಮೊದಲ ಹಂತದಲ್ಲಿ 5,000 ಹೆಕ್ಟೇರ್ ಖುಷ್ಕಿ ಭೂಮಿಯಲ್ಲಿ ಇಸ್ರೇಲ್ ಮಾದರಿ ಕೃಷಿ ಪ್ರಯೋಗ
  • ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯಕ್ಕಾಗಿ 150 ಕೋಟಿ ರೂ. ಮೀಸಲು
  • ಕೃಷಿ ಇಲಾಖೆ ಸಚಿವರನ್ನೊಳಗೊಂಡ ಕೃಷಿ ಸಮನ್ವಯ ಉನ್ನತ ಸಮಿತಿ ಸ್ಥಾಪನೆ
  • ರೈತ ಸಂಘಟನೆ ಬಲಪಡಿಸಲು ರಾಜ್ಯ ರೈತ ಉತ್ಪಾದಕ ಸಂಸ್ಥೆ ಸ್ಥಾಪನೆ
  • ಆಂಧ್ರ ಮಾದರಿಯಲ್ಲಿ ಶೂನ್ಯ ಬಂಡವಾಳ ಕೃಷಿ ಪದ್ಧತಿಗೆ 50 ಕೋಟಿ ರೂ. ಅನುದಾನ
  • ಧಾರವಾಡದ ಕೃಷಿ ವಿವಿಗೆ 3 ಕೋಟಿ ರೂ. ಅನುದಾನ
  • ರೈತರ ಹೊಲಗಳಿಗೆ ಸೆನ್ಸಾರ್ ಅಳವಡಿಸಲು 5 ಕೋಟಿ ರೂ. ಅನುದಾನ
  • ಅಂತರಗಂಗೆ ಸೂಕ್ಷ್ಮ ನೀರಾವರಿ ನಿಗಮಕ್ಕೆ 2 ಕೋಟಿ ರೂ. ಅನುದಾನ
  • ತೋಟಗಾರಿಕಾ ವಲಯದಲ್ಲಿ ಇಸ್ರೇಲ್ ಮಾದರಿ ನೀರಾವರಿಗೆ ಕ್ರಮ
  • ಕಾರವಾರ, ತುಮಕೂರು, ಯಾದಗಿರಿ, ಹಾವೇರಿ ಜಿಲ್ಲೆಯಲ್ಲಿ ಇಸ್ರೇಲ್ ಮಾದರಿ ನೀರಾವರಿ ಯೋಜನೆ ಜಾರಿ
  • 5000 ಹೆಕ್ಟೇರ್ ಪ್ರದೇಶದಲ್ಲಿ ಇಸ್ರೇಲ್ ಮಾದರಿ ನೀರಾವರಿ-150 ಕೋಟಿ ರೂ. ಅನುದಾನ
  • ಇಂಡೋ-ಇಸ್ರೇಲ್ ಸಹಭಾಗಿತ್ವದಲ್ಲಿ 6 ಉತ್ಕೃಷ್ಟ ಕೃಷಿ ಕೇಂದ್ರಗಳ ಸ್ಥಾಪನೆ
  • ತೆಂಗು ಬೆಳೆಗಾರರ ಹಿತರಕ್ಷಣೆಗಾಗಿ 194 ಕೋಟಿ ರೂ. ಮೀಸಲು

ರೈತರ ಸಾಲಮನ್ನಾ :

  • 2017ರ ವರೆಗಿನ ಸುಸ್ತಿ ಸಾಲ ಮನ್ನಾ
  • ಒಂದೇ ಹಂತದಲ್ಲಿ 2 ಲಕ್ಷದವರೆಗಿನ ಸಾಲಮನ್ನಾ
  • ತೆರಿಗೆದಾರರ ಸಾಲಮನ್ನಾ ಇಲ್ಲ
  • ಸರ್ಕಾರಿ ಅಧಿಕಾರಿಗಳ, ಸಹಕಾರ ಸಂಘಗಳ ಸಾಲಮನ್ನಾ
  • ಒಟ್ಟು 34 ಸಾವಿರ ಕೋಟಿ ರೂಪಾಯಿ ಸಾಲಮನ್ನಾ
  • 3 ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರೋ ರೈತರು, ಸರ್ಕಾರಿ ಅಧಿಕಾರಿಗಳು ಮತ್ತು ಸಹಕಾರಿ ಕ್ಷೇತ್ರದ ಅಧಿಕಾರಿಗಳ ಕುಟುಂಬಗಳ ವರ್ಗದವರು ಹೊರಗಿರುತ್ತಾರೆ
  • ಸಕಾಲದಲ್ಲಿ ಸಾಲ ಮರುಪಾವತಿ ಮಾಡಿರೋ ರೈತರಿಗೆ ಅನೂಕೂಲ
  • ಸುಸ್ತಿದಾರರಲ್ಲದ ರೈತರ ಖಾತೆಗಳಿಗೆ 25 ಸಾವಿರ ಮೊತ್ತದ ಹಣ ಪಾವತಿ
  • ರೈತರ ಹೊಸ ಸಾಲ ನೀಡಲು ಅನುಕೂಲವಾಗಲು ರೈತರಿಗೆ ಋಣಮುಕ್ತ ಪತ್ರ
  • ಇಸ್ರೇಲ್ ಮಾದರಿ ಕೃಷಿಗಾಗಿ 150 ಕೋಟಿ ಯೋಜನೆ
  • ಹೊಸ ಮೋಟಾರ್ ವಾಹನಗಳ ತೆರಿಗೆಯನ್ನು ಶೇಕಡಾ 5೦ ರಷ್ಟು ಹೆಚ್ಚಳ
  • ಕೃಷಿ ಉತ್ಪನ್ನ ಸಂರಕ್ಷಣೆ ಘಟಕಗಳ ನಿರ್ಮಾಣಕ್ಕೆ 2,000 ಕೋಟಿ ರೂ ಅನುದಾನ
  • 65 ವರ್ಷ ಮೀರಿದ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ಮಾಸಿಕ 600 ರೂ.ಗಳಿಂದ 1,000 ರೂ.ಗಳಿಗೆ ಏರಿಕೆ

Edited By

Manjula M

Reported By

Shruthi G

Comments