ಮೈತ್ರಿ ಸರ್ಕಾರದ ಮೊದಲ ಬಜೆಟ್ ನ  ಲೈವ್ ಅಪ್ಡೇಟ್ಸ್

05 Jul 2018 11:50 AM | Politics
556 Report

ಬಜೆಟ್ ಲೈವ್ ಅಪ್ಡೇಟ್ಸ್

ಕಾಂಗ್ರೆಸ್ ಹಾಗೂ ಜೆಡಿಸ್ ನ ಪಕ್ಷದ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಅನ್ನು ಹಣಕಾಸು ಖಾತೆ ಹೊಂದಿರುವ, ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಮಂಡನೆಯನ್ನು ಮಾಡಿದ್ದಾರೆ. ಇದೇ ವೇಳೆ ಈ ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ.

ಬಹುನಿರೀಕ್ಷಿತ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಸಿಎಂ ಹೆಚ್.ಡಿ.ಕೆ ಮಂಡಿಸುತ್ತಿದ್ದು, ರೈತರ 2 ಲಕ್ಷದವರೆಗೆ ಸಾಲಮನ್ನಾ ಘೋಷಣೆ ಮಾಡಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಶೇ. 30 ರಿಂದ 32 ಕ್ಕೆ ಏರಿಕೆ ಮಾಡಲಾಗಿದೆ.

ಹಿರಿಯ ನಾಗರಿಕರ ಮಾಸಾಶನವನ್ನು ಹೆಚ್ಚಳ ಮಾಡಲಾಗಿದ್ದು, 600 ರೂ.ನಿಂದ 1000 ರೂ.ಗೆ ಮಾಸಾಶನ ಹೆಚ್ಚಳ ಮಾಡಲಾಗಿದೆ. ಇದರಿಂದ 32 ಲಕ್ಷ ಹಿರಿಯ ನಾಗರೀಕರಿಗೆ ಲಾಭವಾಗಲಿದೆ ಎಂದಿದ್ದಾರೆ

 

Edited By

Manjula M

Reported By

Manjula M

Comments

Cancel
Done