Breaking News : ಕೇಂದ್ರ ಸರ್ಕಾರದಿಂದ ರೈತರಿಗೆ ಬಂಪರ್ ಗಿಫ್ಟ್..! ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದ ಏರಿಕೆ..!!

04 Jul 2018 5:38 PM | Politics
2540 Report

ಮುಂಬರುವ ಲೋಕಸಭೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಉಡುಗೊರೆ ನೀಡಿ ಕೃಷಿಕರನ್ನು ಓಲೈಸುವ ಯತ್ನ ನಡೆಸಿದೆ.

ಭತ್ತ, ರಾಗಿ ಮತ್ತು ಕಬ್ಬು ಸೇರಿದಂತೆ ಒಟ್ಟು 14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ(ಎಂಎಸ್‍ಪಿ)ಯನ್ನು ಕೇಂದ್ರ ಸರ್ಕಾರ ಇಂದು ಘೋಷಿಸಿದೆ. ಇದು ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದ ಏರಿಕೆ ಎಂದು ಬಣ್ಣಿಸಲಾಗಿದೆ. ಆರ್ಥಿಕ ವ್ಯವಹಾರಗಳ ಕುರಿತ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಬೆಳೆಯುವ 14 ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಕೇಂದ್ರದ ನಿರ್ಧಾರದಿಂದ 15 ಸಾವಿರ ಕೋಟಿ ರೂ. ಹೊರೆಯಾಗಲಿದ್ದು, ಇದರಿಂದ ದೇಶದ 12 ಕೋಟಿ ರೈತರಿಗೆ ಲಾಭವಾಗಲಿದೆ. ದೇಶದ ರಾಗಿ ಬೆಳೆಗಾರರಿಗೆ ಬಂಪರ್ ಆಫರ್ ನೀಡಿದ್ದು, ಪ್ರತಿ ಕ್ವಿಂಟಲ್ ರಾಗಿಗೆ 2,897 ರೂ..ಪ್ರತಿ ಕ್ವಿಂಟಾಲ್ ಹೈಬ್ರೀಡ್ ಜೋಳಕ್ಕೆ 2, 430 ರೂ.,ಪ್ರತಿ ಕ್ವಿಂಟಲ್ ಸೂರ್ಯಕಾಂತಿ ಬೀಜಕ್ಕೆ 5, 388 ರೂ. ಪಡೆಯಲಿದ್ದಾರೆ. ಶೇ.50ರಷ್ಟು ಹೆಚ್ಚುವರಿಯಾಗಿ ಬೆಂಬಲ ಬೆಲೆಯನ್ನು ಘೋಷಣೆ ಮಾಡಲಾಗಿದೆ.

ಈ ಬೆಳೆಗಳಿಗೆ ಪ್ರತಿ ಕ್ವಿಂಟಾಲ್‍ಗೆ 200 ರೂ. ಗಳ ಎಂಎಸ್‍ಪಿ ಘೋಷಿಸಲು ಇಂದು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ರಾಜಧಾನಿ ದೆಹಲಿಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಮುಖ್ಯವಾಗಿ ಭತ್ತ(ಸಾಮಾನ್ಯ ವಿಧ), ರಾಗಿ ಸೇರಿದಂತೆ ಒಟ್ಟು 14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮುಂಗಾರು ಹಂಗಾಮಿನಲ್ಲಿ 14 ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಶೇಕಡ 150ರಷ್ಟು ಎಂಎಸ್‍ಪಿ ದೊರೆಯಲಿದೆ. ಇದರಿಂದಾಗಿ (200 ರೂ. ಎಂಎಸ್‍ಪಿ ಹೆಚ್ಚಳ) ಪ್ರತಿ ಕ್ವಿಂಟಾಲ್ ಭತ್ತ 1,750 ರೂ.ಗಳಿಗೆ ಹೆಚ್ಚಾಗಲಿದೆ.

Edited By

Shruthi G

Reported By

Shruthi G

Comments