ರಾಜ್ಯ ಸರ್ಕಾರದ ಈ ಬಾರಿಯ ಬಜೆಟ್ ನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಸ್ಥಾಪನೆಯಾಗಲಿದೆ ಈ ಕೇಂದ್ರ..!

03 Jul 2018 2:16 PM | Politics
2247 Report

ಇತ್ತಿಚಿಗೆ ರಾಜ್ಯದಲ್ಲಿ ಮಹಿಳೆಯರ ಮೇಲೆ ಸಾಕಷ್ಟು ರೀತಿಯ  ದೌರ್ಜನ್ಯಗಳು  ನಡೆಯುತ್ತಲೆ ಇದೆ. ಹಾಗಾಗಿ ರಾಜ್ಯದ ಮಹಿಳಾ ಠಾಣೆಗಳನ್ನು ನಿರ್ಭಯ ಕೇಂದ್ರಗಳನ್ನಾಗಿಸಲು ರಾಜ್ಯ ಸರ್ಕಾರವು ಈಗಾಗಲೇ ಸಿದ್ಧತೆ ನಡೆಸುತ್ತಿದೆ, ನಿರ್ಭಯಾ ನಿದಿಯನ್ನು ಸದ್ಬಳಕೆ ಮಾಡುವ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಈ ವಿಷಯವನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಠಾಣೆಗಳ ಪೊಲೀಸರ ಜೊತೆಗೆ  ನಿರ್ಭಯಾ ಕೇಂದ್ರದಲ್ಲಿ ಮಹಿಳೆಯರ ಪ್ರಕರಣಗಳ ವಿಶೇಷ ನಿರ್ವಹಣೆಗಾಗಿಯೇ ಲಾಯರ್ಸ್ , ವೈದ್ಯರು, ಮನೋತಜ್ಞರು, ಮಕ್ಕಳ ತಜ್ಞರು, ಮಹಿಳಾ ವಿಷಯಗಳ ಕೌನ್ಸಿಲರ್‌ಗಳನ್ನು ನೇಮಕ ಮಾಡಲಾಗುತ್ತಿದೆ. ಮೊದಲನೇ ಹಂತದಲ್ಲಿ ಬೆಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿರುವ ಮಹಿಳಾ ಠಾಣೆಗಳನ್ನು ನಿರ್ಭಯಾ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ. ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತಲಾ ಒಂದು ಮಹಿಳಾ ಪೊಲೀಸ್‌ ಠಾಣೆಗಳನ್ನು ನಿರ್ಭಯಾ ಕೇಂದ್ರವನ್ನಾಗಿಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರತಿಯೊಂದು ನಿರ್ಭಯಾ ಕೇಂದ್ರ ಸ್ಥಾಪನೆಗೆ ತಲಾ 2 ಕೋಟಿ ರೂ.ವನ್ನು ಮೀಸಲಿಡಲಾಗುತ್ತಿದೆ. ಕೇಂದ್ರ ಸರ್ಕಾರದ ಶೇ.60ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನದಿಂದ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Edited By

Manjula M

Reported By

Manjula M

Comments

Cancel
Done