ಕೇಂದ್ರ ಸರ್ಕಾರದಿಂದ ನೌಕರರಿಗೆ ಸಿಕ್ತು ಭರ್ಜರಿ ಗಿಫ್ಟ್..!

03 Jul 2018 10:52 AM | Politics
428 Report

ಇದೀಗ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಭರ್ಜರಿ ಗಿಫ್ಟ್ ಒಂದನ್ನು  ನೀಡಿದೆ. ತುಂಬಾ ದಿನಗಳಿಂದ ಕೇಂದ್ರ ಸರ್ಕಾರಿ ನೌಕರರು ನಿರೀಕ್ಷಿಸುತ್ತಿದ್ದಂತಹ 7 ನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಜಾರಿಗೊಳಿಸಲು ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ.

ಈ ಯೋಜನೆಯನ್ನು ಈಗಾಗಲೇ ಅಸ್ಸಾಂ ಸರ್ಕಾರ ಕೂಡಾ ಆಯೋಗದ ಶಿಪಾರಸ್ಸಿಗೆ ಅನುಗುಣವಾಗಿ ಸಮಿತಿಯನ್ನು ರಚಿಸಿದ್ದು ಅನುಷ್ಟಾನಗೊಳಿಸಲು ಮುಂದಾಗಿದೆ. ಈ ಯೋಜನೆ ಶಿಘ್ರದಲ್ಲಿಯೇ ಜಾರಿಗೆ ಬರಲಿದೆ ಎಂದು ವರದಿಯನ್ನು ಮಾಡಲಾಗಿದೆ. ಈ ಆಯೋಗದ ಶಿಪಾರಸ್ಸುಗಳಿಂದಾಗಿ ಮುಖ್ಯವಾಗಿ ನೌಕರರ ಗೃಹ ಭತ್ಯೆ (ಎಚ್.ಆರ್.ಎ)ಯಲ್ಲಿ ಹೆಚ್ಚಳವಾಗಲಿದೆ. ಕೆಂದ್ರ ನೌಕರರ ವೇತನದಲ್ಲಿ ಶೇಕಡ 10 ರಷ್ಟು ಎಚ್ ಆರ್ ಎ ಪಡೆಯಲಿದ್ದಾರೆ. ಜಿಲ್ಲಾ ಹಾಗೂ ಉಪ ವಿಭಾಗ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಶೇ 7 ರಿಂದ 8 ರಷ್ಟು ಗೃಹ ಭತ್ಯೆ ಸಿಗಲಿದೆ ಎಂದಿದ್ದಾರೆ.

Edited By

Manjula M

Reported By

Manjula M

Comments