ಬಿಗ್ ಬ್ರೇಕಿಂಗ್ : ಸಿಎಂ ಎಚ್'ಡಿಕೆ ಸಂಪುಟ ಸೇರಲಿರುವ ಕಾಂಗ್ರೆಸ್ ನ ಈ 5 ಶಾಸಕರು..! ಯಾರ್ಯಾರು ಗೊತ್ತಾ..!?

28 Jun 2018 3:52 PM | Politics
15735 Report

ಕರ್ನಾಟಕದ ಬಜೆಟ್ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು ಎನ್ನಲಾಗಿದೆ . ಕಾಂಗ್ರೆಸ್‌ 6 ಖಾತೆಗಳನ್ನು ಉಳಿಸಿಕೊಂಡಿದ್ದು ಅದರಲ್ಲಿ 5 ಖಾತೆಗಳ ಹಂಚಿಕೆ ನಡೆಯಲಿದೆ. ಕಾಂಗ್ರೆಸ್‌ನ 5 ಶಾಸಕರು ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ಸೇರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ನಾಲ್ಕು ಅಥವ ಐದು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಬಜೆಟ್ ಅಧಿವೇಶನದ ಬಳಿಕ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯಲಿದ್ದಾರೆ ಎನ್ನಲಾಗಿದೆ.

ಸಂಪುಟ ಸೇರಲಿರುವ ಈ ಐದು ಶಾಸಕರು..! ಯಾರ್ಯಾರು ಗೊತ್ತಾ? ಇಲ್ಲಿದೆ ಪಟ್ಟಿ...

ಎಂ.ಬಿ.ಪಾಟೀಲ್, ಬಿ.ಕೆ.ಸಂಗಮೇಶ್ (ಲಿಂಗಾಯತು), ಸಿ.ಎಸ್.ಶಿವಳ್ಳಿ (ಕುರುಬ), ಈ ತುಕಾರಾಂ (ಎಸ್‌ಟಿ), ರಾಮಲಿಂಗಾ ರೆಡ್ಡಿ ಅಥವಾ ಎಂ ಕೃಷ್ಣಪ್ಪ (ರೆಡ್ಡಿ-ಒಕ್ಕಲಿಗ) ಅವರುಗಳಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.

ಲಿಂಗಾಯತ ಸಮುದಾಯದ ಪ್ರಭಾವೀ ನಾಯಕರಾಗಿರುವ ಎಂ.ಬಿ.ಪಾಟೀಲರನ್ನು ಸಂಪುಟಕ್ಕೆ ಸೇರಿಸಿಕೊಂಡು ಉತ್ತರ ಕರ್ನಾಟಕ ಕಡೆ ಹೆಚ್ಚಿನ ಗಮನ ನೀಡುವುದು ಕಾಂಗ್ರೆಸ್ ತಂತ್ರವಾಗಿದೆ. ಬಿ.ಕೆ.ಸಂಗಮೇಶ್ವರ ಅವರು ಸಹ ಲಿಂಗಾಯತ ಸಮಯದಾಯಕ್ಕೆ ಸೇರಿದವರಾಗಿದ್ದಾರೆ. ಇದುವರೆಗೂ ಭದ್ರಾವತಿಯ ಶಾಸಕರು ಯಾರೂ ಸಚಿವರಾಗಿಲ್ಲ. ಬಿ.ಕೆ.ಸಂಗಮೇಶ್ವರ ಅವರು ಸಚಿವರಾದರೆ ದಾಖಲೆ ನಿರ್ಮಾಣವಾಗಲಿದೆ. ಬೆಂಗಳೂರು ನಗರದಿಂದ ರಾಮಲಿಂಗಾ ರೆಡ್ಡಿ ಅಥವ ಎಂ.ಕೃಷ್ಣಪ್ಪ ಅವರ ಪೈಕಿ ಒಬ್ಬರು ಸಂಪುಟ ಸೇರುವ ಸಾಧ್ಯತೆ ಇದೆ. ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ.ಎಸ್.ಶಿವಳ್ಳಿ ಅವರು ಸಹ ಕುರುಬ ಸಮುದಾಯದ ಕೋಟಾದಲ್ಲಿ ಸಂಪುಟ ಸೇರುವ ಸಾಧ್ಯತೆ ಇದೆ. ಎಸ್‌ಟಿ ಸಮುದಾಯದ ಕೋಟಾದಡಿ ಸಂಡೂರು ಶಾಸಕ ಈ. ತುಕಾರಂ ಅವರು ಸಂಪುಟ ಸೇರಲಿದ್ದಾರೆ ಎಂದು ತಿಳಿದುಬಂದಿದೆ

Edited By

Shruthi G

Reported By

Shruthi G

Comments