ಹೈಟೆಕ್ ಕಾರುಗಳ ವಿಷ್ಯದಲ್ಲಿ ಯೂ-ಟರ್ನ್ ಹೊಡೆದ ಸಚಿವ ಜಮೀರ್ ಅಹಮದ್

28 Jun 2018 12:30 PM | Politics
2380 Report

ರೈತರ ಸಾಲಮನ್ನಾ ಮಾಡಲು ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಒದ್ದಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ನಾನು ಬೆನ್ಝ್, ಬಿಎಂಡಬ್ಲ್ಯೂ ನಂತರ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಹೊಸ ಕಾರು ಖರೀದಿಸಿಕೊಡಿ ಎಂದು ಕೇಳಿಲ್ಲ ಎಂದು ಸಚಿವ ಜಮೀರ್ ಅಹಮದ್ ಖಾನ್ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ತಮಗೆ ಪ್ರಸ್ತುತ ಸರ್ಕಾರ ನೀಡಿರುವ ಕಾರನ್ನು ಬೇಡ ಎನ್ನುತ್ತಿದ್ದೀರಂತಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಅವರು ಜನರಿಗೆ ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಲು ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ಬೆಂಜ್, ಬಿಎಂಡಬ್ಲ್ಯೂ, ನಂತರ ಕೋಟ್ಯಾಂತರ ಬೆಲೆ ಬಾಳುವ ಕಾರು ಖರೀದಿಸಿ ಕೊಡಿ ಎಂದು ಕೇಳಿಲ್ಲ. ಇಲಾಖೆಯಲ್ಲಿಯೇ ಇರುವ ಬೇರೆ ಕಾರು ಬದಲಿಸಿಕೊಡಿ ಎಂದು ಹೇಳಿದ್ದೇನೆಂದು ಹೇಳಿದ್ದಾರೆ.  ರೈತರಿಗೆ ಒಳ್ಳೆಯದಾಗುತ್ತದೆ ಎನ್ನುವುದಾದರೆ, ಈಗ ಕೊಟ್ಟಿರುವ ಕಾರೂ ಕೂಡ ಬೇಡ, ಅದನ್ನೂ ಕೂಡ ವಾಪಸ್ ಕೊಡುತ್ತೇನೆಂದು ತಿಳಿಸಿದ್ದಾರೆ.

Edited By

Shruthi G

Reported By

Shruthi G

Comments