Flash News : 2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ಪಟ್ಟಿ ಫೈನಲ್..!! ಯಾರಿಗೆ ಯಾವ ಕ್ಷೇತ್ರ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..

23 Jun 2018 1:52 PM | Politics
24430 Report

ಮುಂಬರುವ 2019 ರ ಲೋಕಸಭೆ ಚುನಾವಣೆ ಭಾರೀ ಕುತೂಹಲ ಕೆರಳಿಸಿದ್ದು, ಸಂಘಪರಿವಾರವನ್ನು ಈಗಿಂದಲೇ ಬಿಜೆಪಿಗೆ ನೀಡುವುದಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಚಾಮರಾಜಪೇಟೆಯ ಕೇಶವಕೃಪಾದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧೆ ಮಾಡುವುದರ ಬಗ್ಗೆ ಬಿಜೆಪಿ ನಾಯಕರಿಗೆ ಸೂಚನೆ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ನಡುವೆ ಸದ್ಯದಲ್ಲೇ ನಡೆಯಲಿರುವ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಳ್ಳಾರಿ ಲೋಕಸಭೆ ಉಪಚುನಾವಣೆಗೆ ಶ್ರೀರಾಮುಲು ಸಹೋದರಿ ಜೆ.ಶಾಂತಾ, ಶಿವಮೊಗ್ಗ ಲೋಕಸಭೆ ಉಪಚುನಾವಣೆಗೆ ಬಿ.ಎಸ್.ವೈ ಪುತ್ರ ಬಿ.ವೈ ರಾಘವೇಂದ್ರ, ಮಂಡ್ಯ ಲೋಕಸಭೆ ಕ್ಷೇತ್ರದಿಂದ ವಿದ್ಯಾ ನಾಗೇಂದ್ರ ಅವರನ್ನು ಸ್ಪರ್ಧೆ ಮಾಡುವ ಬಗ್ಗೆ ಆರ್.ಎಸ್.ಎಸ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಬದಲು ಡಿ.ವಿ.ಎಸ್ ಹೆಸರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಆರ್.ಎಸ್.ಎಸ್ ಶಿಫಾರಸು ಮಾಡಿದ್ದು, ಶೋಭಾ ಕರಂದ್ಲಾಜೆಯವರನ್ನು ವಿಧಾನಸಭಾ ಪರಿಷತ್ ಸದ್ಯಸ ಸ್ಥಾನವನ್ನು ನೀಡುವಂತೆ ಹೇಳಿದೆ ಎನ್ನಲಾಗಿದೆ.

ಇನ್ನು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರಕ್ಕೆ ದಾಸರಹಳ್ಳಿ ಮುನಿರಾಜು, ಚಿತ್ರದುರ್ಗ ಕ್ಷೇತ್ರಕ್ಕೆ ಜನಾರ್ಧನ ಸ್ವಾಮಿ, ತುಮಕೂರು ಕ್ಷೇತ್ರಕ್ಕೆ ಜಿ.ಎಸ್.ಬಸವರಾಜು, ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿರುವ ಡಿ.ಎಸ್.ವೀರಯ್ಯ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಚಾಮರಾಜನಗರಕ್ಕೆ ಶಿವಣ್ಣ ಬದಲು ನಂಜುಂಡ ಸ್ವಾಮಿ, ಸುನೀಲ್ ವಲ್ಯಾಪುರೆ ಹೆಸರನ್ನು ಗುಲ್ಬರ್ಗಾ ಕ್ಷೇತ್ರಕ್ಕೆ ಹಾಸನ ನವಿಲೆ ಪ್ರಕಾಶ್ ಅವರಿಗೆ ಅವಕಾಶ ನೀಡಬೇಕು ಅಂತ ಆರ್.ಎಸ್.ಎಸ್ ಸೂಚನೆ ನೀಡಲಾಗಿದೆ ಎನ್ನಲಾಗಿದ್ದು. ಉಳಿದಂತೆ ಹಾಲಿ ಬಿಜೆಪಿ ಲೋಕಸಭಾ ಸದ್ಯಸರಿಗೆ ಟಿಕೇಟ್ ನೀಡಬೇಕು, ಇದಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಕನಿಷ್ಟು 25 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್ ಅನ್ನು ಆರ್.ಎಸ್.ಎಸ್ ನಾಯಕರು ಬಿಜೆಪಿ ವರಿಷ್ಠರಿಗೆ ನೀಡಿದ್ದಾರೆ ಎನ್ನಲಾಗಿದೆ.

 

Edited By

Shruthi G

Reported By

Shruthi G

Comments