ಬಿಗ್ ಬ್ರೇಕಿಂಗ್ : ಇಲ್ಲಿದೆ ನೋಡಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ..!ಯಾರಿಗೆ ಯಾವ ಜಿಲ್ಲೆ ?ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

23 Jun 2018 9:38 AM | Politics
14713 Report

ಮೈತ್ರಿ ಸರ್ಕಾರದಲ್ಲಿ  ಇನ್ನು ಸರಿಯಾಗಿ  ಬಗೆಹರಿಯದ ನಾನಾ ಗೊಂದಲಗಳಿವೆ. ಸಚಿವರು ಇನ್ನು ತಮ್ಮಗೆ ನೀಡಿರು ಖಾತೆಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದಕ್ಕೆ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಸಮಯದಲ್ಲಿ, ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಗೆ ದಿನಾಂಕವು ಕೂಡ ಘೋಷಣೆಯಾಗಿದೆ.

ಇವೆಲ್ಲದರ  ನಡುವೆಯೆ  ರಾಜ್ಯ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡುವುದಕ್ಕೂ ಕೂಡ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಿದ್ದತೆ ನಡೆಸಿದೆ. ಈಗಾಗಲೇ ತಮ್ಮ ಮುಂದೆ ಇರುವಂತಹ ಒಂದು ಪಟ್ಟಿಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹಿರಿಯ ನಾಯಕರ ಜೊತೆಗೆ ಚರ್ಚೆ ನಡೆಸಿದ್ದು, ಮುಂದಿನ ವಾರದೊಳಗೆ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಬಳಿ ಇರುವಂತಹ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯಲ್ಲಿ  ಯಾರ್ಯಾರಿಗೆ ಯಾವ ಜಿಲ್ಲೆ  ಅನ್ನುವದರ ಸಂಭಾವನೀಯ ಪಟ್ಟಿ ಈ ಕೆಳಕಂಡಂತಿದೆ.

ಮೈಸೂರು- ಜಿ.ಟಿ.ದೇವೆಗೌಡ,ಮಂಡ್ಯ- ಸಿ.ಎಸ್.ಪುಟ್ಟರಾಜು,ಹಾಸನ -ಹೆಚ್.ಡಿ.ರೇವಣ್ಣ,ತುಮಕೂರು -ಶ್ರೀನಿವಾಸ್ ( ಗುಬ್ಬಿ),ಚಾಮರಾಜನಗರ –ಪುಟ್ಟರಂಗಶೆಟ್ಟಿ,ಕೋಲಾರ- ಕೃಷ್ಣ ಬೈರೆಗೌಡ,ಚಿಕ್ಕಬಳ್ಳಾಪುರ- ಎನ್ ಹೆಚ್ ಶಿವಶಂಕರರೆಡ್ಡಿ, ಕೊಡಗು- ಕೆ.ಜೆ.ಜಾರ್ಜ್,ದಕ್ಷಿಣಕನ್ನಡ- ಯು.ಟಿ.ಖಾದರ್,ಉಡುಪಿ- ಡಾ.ಜಯಮಾಲಾ,ಶಿವಮೊಗ್ಗ -ಡಿ.ಸಿ.ತಮ್ಮಣ್ಣ, ಚಿಕ್ಕಮಗಳೂರು- ಸಾ.ರಾ.ಮಹೇಶ್,ರಾಮನಗರ- ಡಿ.ಕೆ.ಶಿವಕುಮಾರ್,ಬಳ್ಳಾರಿ- ಡಿ.ಕೆ.ಶಿವಕುಮಾರ್,ದಾವಣಗೆರೆ- ಎನ್ ಮಹೇಶ್,ಬೆಂಗಳೂರು- ಗ್ರಾಮಾಂತರ ಜಮೀರ್ ಅಹ್ಮದ್ ಖಾನ್,ಬೆಂಗಳೂರು -ನಗರ ಡಾ.ಜಿ.ಪರಮೇಶ್ವರ, ಚಿತ್ರದುರ್ಗ- ವೆಂಕಟರಮಣಪ್ಪ,ಹಾವೇರಿ -ಆರ್ ಶಂಕರ್,ಧಾರವಾಡ- ರಮೇಶ್ ಜಾರಕಿಹೊಳಿ,ಬೆಳಗಾವಿ -ರಮೇಶ್ ಜಾರಕಿಹೊಳಿ,ಉತ್ತರಕನ್ನಡ -ಆರ್ ವಿ.ದೇಶಪಾಂಡೆ,ಗದಗ- ಕೃಷ್ಣ ಬೈರೆಗೌಡ,ಕೊಪ್ಪಳ -ಬಂಡೆಪ್ಪ ಖಾಶಂಪೂರ, ಕಲಬುರ್ಗಿ -ಪ್ರಿಯಾಂಕ ಖರ್ಗೆ,ಯಾದಗಿರಿ- ಪ್ರಿಯಾಂಕ ಖರ್ಗೆ,ರಾಯಚೂರು- ವೆಂಕಟರಾವ್ ನಾಡಗೌಡ, ಬಾಗಲಕೋಟ -ಎಂ.ಸಿ.ಮನಗೂಳಿ,ವಿಜಯಪುರ- ಶಿವಾನಂದ ಪಾಟೀಲ್, ಬೀದರ-ರಾಜಶೇಖರ್ ಪಾಟೀಲ್ ಹುಮ್ನಾಬಾದ್

Edited By

Manjula M

Reported By

Manjula M

Comments